Asianet Suvarna News Asianet Suvarna News

ಸಾಯುವ ಮುನ್ನ ಮನುಕುಲಕ್ಕೆ ಮಾರಕವಾಗುವ ಎಚ್ಚರಿಕೆ ನೀಡಿದ ಹಾಕಿಂಗ್

ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಾಯುವ ಮುನ್ನ ಮನುಕುಲಕ್ಕೆ ಮಾರಕವಾಗುವ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಎಚ್ಚರಿಕೆ ಪ್ರಕಾರ ಜೆನೆಟಿಕಲ್ ಇಂಜಿನಿಯರಿಂಗ್ ನಿಂದ ಸೃಷ್ಟಿ ಮಾಡುವ ಜೀವಿಗಳ ಬಗ್ಗೆ ಈ ಎಚ್ಚರಿಕೆ ನೀಡಿದ್ದಾರೆ. 

Whats Stephen Hawking Final Fears Was
Author
Bengaluru, First Published Oct 15, 2018, 1:16 PM IST
  • Facebook
  • Twitter
  • Whatsapp

ವಾಷಿಂಗ್ಟನ್ : ಪ್ರಸಿದ್ಧ ವಿಜ್ಞಾನಿ  ಸ್ಟೀಫನ್ ಹಾಕಿಂಗ್ ಸಾಯುವ ಮುನ್ನ ಗಂಭೀರ ಎಚ್ಚರಿಕೆಯನ್ನು ನೀಡಿದ್ದು ಇದು ಮನುಕುಲಕ್ಕೆ ಮಾರಕವಾಗುವ ಎಚ್ಚರಿಕೆಯಾಗಿದೆ.  

ಸನ್ ವರದಿಯ ಪ್ರಕಾರ ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಸೃಷ್ಟಿ ಮಾಡುವ ಜೀವಿಗಳು ನಾಗರೀಕತೆಯನ್ನೇ ನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಹೇಳಿದ್ದಾರೆ. 

ಕಳೆದ ಮಾರ್ಚ್ ತಿಂಗಳಲ್ಲಿ ಹಾಕಿಂಗ್ ಅವರು ನಿಧನರಾಗಿದ್ದು ಅದಕ್ಕೂ ಮೊದಲೇ ಬರೆದ ಅವರ ಪುಸ್ತಕ ದ ಬಿಗ್ ಕ್ವಶನ್ಸ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 

ಈ ಪುಸ್ತಕವು ಮಂಗಳವಾರ ಬಿಡುಗಡೆ ಮಾಡಲಾಗುತ್ತಿದೆ. 

ಡಿಎನ್ ಎಗಳನ್ನು ಎಡಿಟ್ ಮಾಡುವ ಮೂಲಕ ಸೃಷ್ಟಿ ಮಾಡುವ ಸೂಪರ್ ಹ್ಯೂಮನ್ ಗಳು ಯಾವುದೇ ರೀತಿಯ ಸಮಸ್ಯೆಯನ್ನೂ ಕೂಡ ಎದುರಿಸಿ ಬದುಕಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ. 

ಅನೇಕ ವಿಜ್ಞಾನಿಗಳು ಹಾಕಿಂಗ್ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು,  ಮನುಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಪೃವೃತ್ತರಾಗಿದ್ದಾರೆ. 

Follow Us:
Download App:
  • android
  • ios