ಶ್ರೀದೇವಿ ಕುಟುಂಬದ ಕೈ ಸೇರಿದ ವಿಧಿವಿಜ್ಞಾನ ವರದಿಯಲ್ಲಿ ಏನಿದೆ?

First Published 26, Feb 2018, 3:58 PM IST
What is there in sridevis forensic report
Highlights

ಈ ದೇಶದ ಕಾನೂನಿನಂತೆ ಯಾರೇ ಆಸ್ಪತ್ರೆಯಿಂದ ಹೊರಗೆ ಮೃತಪಟ್ಟರೂ, ಆ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆ ನಡೆಸಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವೇ ಮೃತದೇಹವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. 

ದುಬೈ: ಈ ದೇಶದ ಕಾನೂನಿನಂತೆ ಯಾರೇ ಆಸ್ಪತ್ರೆಯಿಂದ ಹೊರಗೆ ಮೃತಪಟ್ಟರೂ, ಆ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆ ನಡೆಸಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವೇ ಮೃತದೇಹವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. 

ಇದೇ ಪ್ರಕ್ರಿಯೆಯೂ ನಟಿ ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದು, ನೈಜ ಸಾವೇ ಆದರೂ, ಎಲ್ಲ ಪ್ರಕ್ರಿಯೆಗಳು ಮುಗಿಯಬೇಕು. 

ಇದೀಗ ಫೋರೆನ್ಸಿಕ್ ವರದಿ ನಟಿಯ ಕುಟುಂಬದ ಸದಸ್ಯರ ಕೈ ಸೇರಿದೆ. ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಹಾಗೂ ಕುಟುಂಬದ ಸದಸ್ಯರು ಸೀಲ್ ಆದ ಈ ವರದಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದು, ಅಲ್ಲಿ ಇದನ್ನು ಓಪನ್ ಮಾಡಲಾಗುತ್ತದೆ. ನಂತರವಷ್ಟೇ ಸಾವಿಗೆ ನಿಖರ ಕಾರಣವನ್ನು ಕುಟುಂಬದ ಸದಸ್ಯರಿಗೆ ತಿಳಿಸಲಾಗುತ್ತದೆ. ಆ ನಂತರ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.
 

loader