ರಾಯಚೂರು [ಜು.14] : ಅತೃಪ್ತರಾಗಿ ರಾಜೀನಾಮೆ ನೀಡಿ ಮುಂಬೈ ಸೇರಿಕೊಳ್ಳುತ್ತಿರುವ ಕೈ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಸಚಿವ ಸ್ಥಾನ ನೀಡದಿರುವುದೇ ತಮ್ಮ ತಂದೆ ಅತೃಪ್ತರಾಗಲು ಕಾರಣ ಎಂದು ಶಾಸಕ ಪ್ರತಾಪ್ ಗೌಡ ಪಾಟೀಲ್ ಪುತ್ರ ಪ್ರಸನ್ನಗೌಡ ಪಾಟೀಲ್ ಹೇಳಿದ್ದಾರೆ. 

ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಸ್ಕಿ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ.  ಈ ನಿಟ್ಟಿನಲ್ಲಿ ಮತದಾರರ ಅಭಿಪ್ರಾಯ ಪಡೆದುಕೊಂಡೇ ಪ್ರತಾಪ್ ಗೌಡ ಪಾಟೀಲ್ ಈ ನಿರ್ಧಾರ ಮಾಡಿದ್ದಾರೆ ಎಂದು ಪ್ರಸನ್ನ ಗೌಡ ಪಾಟೀಲ್ ಹೇಳಿದ್ದಾರೆ.  

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಪ್ರತಾಪ್ ಗೌಡರು ಬಿಜೆಪಿಗೆ ಹೋಗುತ್ತಾರಾ ಎನ್ನುವ ಬಗ್ಗೆಯೂ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ ಎಂದರು. ಕ್ಷೇತ್ರದಲ್ಲಿ ಶಾಸಕ ಸ್ಥಾನ ಅನರ್ಹವಾದರೆ  ಪ್ರತಾಪ ಗೌಡರ ಬದಲಿ ಪ್ರಸನ್ನ ಗೌಡ ಪಾಟೀಲ್ ಸ್ಪರ್ಧಿಸುತ್ತಾರೆ ಎನ್ನುವ ವದಂತಿ ಇದ್ದು,  ಈ ಬಗ್ಗೆಯೂ ನಿರ್ಧಾರವಾಗಿಲ್ಲ  ಎಂದು ಪ್ರತಾಪ ಗೌಡ ಪಾಟೀಲ್ ಪುತ್ರ ಪ್ರಸನ್ನ ಪಾಟೀಲ ಹೇಳಿದರು.