ಸಂಖ್ಯಾ ಬಲದಲ್ಲಿ ಅದೃಷ್ಟದ ಫಲಾಫಲ; ನಿಮ್ಮ ಅದೃಷ್ಟ ಸಂಖ್ಯೆಯ ಫಲಾಫಲಗಳು ಹೇಗಿವೆ ನೋಡಿ

news | 1/1/2018 | 8:37:00 AM
Shrilakshmi Shri
Suvarna Web Desk
Highlights

ಈ ವರ್ಷದ ಮಾಸ್ಟರ್ ನಂಬರ್ 2 2018 ಎಂಬುದು ನ್ಯೂಮರಾಲಜಿ ಪ್ರಕಾರ 2+0+1+8=11=1+1=2. ಅಂದರೆ ಈ ವರ್ಷದ ಮಾಸ್ಟರ್ ಸಂಖ್ಯೆ 2. ಇದು ಚಂದ್ರನ ಸಂಖ್ಯೆ. ಹಾಗಾಗಿ ಈ ವರ್ಷವನ್ನು ಆಳುವುದು ಚಂದ್ರಗ್ರಹ. ಆದ್ದರಿಂದ ಇದು ಮಹಿಳೆಯರಿಗೆ ಶುಭ ತರುವ ವರ್ಷ. ಈ ವರ್ಷ ಮಹಿಳೆಯರ ಕೈ ಮೇಲಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನ್ಯೂಮರಾಲಜಿ ಪ್ರಕಾರ 2018  ಸೃಜನಶೀಲ ವ್ಯಕ್ತಿಗಳಿಗೆ ಉಜ್ವಲ ಅವಕಾಶಗಳನ್ನು ನೀಡಲಿದೆ. ಅವರ ಪ್ರತಿಭೆಗೆ ಮನ್ನಣೆ ಸಿಗಲಿದೆ. 

ಈ ವರ್ಷದ ಮಾಸ್ಟರ್ ನಂಬರ್ 2 2018 ಎಂಬುದು ನ್ಯೂಮರಾಲಜಿ ಪ್ರಕಾರ 2+0+1+8=11=1+1=2. ಅಂದರೆ ಈ ವರ್ಷದ ಮಾಸ್ಟರ್ ಸಂಖ್ಯೆ 2. ಇದು ಚಂದ್ರನ ಸಂಖ್ಯೆ. ಹಾಗಾಗಿ ಈ ವರ್ಷವನ್ನು ಆಳುವುದು ಚಂದ್ರಗ್ರಹ. ಆದ್ದರಿಂದ ಇದು ಮಹಿಳೆಯರಿಗೆ ಶುಭ ತರುವ ವರ್ಷ. ಈ ವರ್ಷ ಮಹಿಳೆಯರ ಕೈ ಮೇಲಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನ್ಯೂಮರಾಲಜಿ ಪ್ರಕಾರ 2018  ಸೃಜನಶೀಲ ವ್ಯಕ್ತಿಗಳಿಗೆ ಉಜ್ವಲ ಅವಕಾಶಗಳನ್ನು ನೀಡಲಿದೆ. ಅವರ ಪ್ರತಿಭೆಗೆ ಮನ್ನಣೆ ಸಿಗಲಿದೆ. 

01. ಬದಲಾವಣೆಯೊಂದಿಗೆ ಯಶಸ್ಸು ನಿಮಗೆ

ಈ ವರ್ಷ ಸಾಕಷ್ಟು ಹೊಸ ಬದಲಾವಣೆಗಳನ್ನು ತರುತ್ತದೆ. ಪ್ರಮುಖವಾಗಿ ಔದ್ಯೋಗಿಕವಾಗಿ ಬದಲಾವಣೆ ಕಾಣುತ್ತೀರಿ. ಯಶಸ್ಸಿನ ಮಾರ್ಗದಲ್ಲಿ ಹಲವು ನಕಾರಾತ್ಮಕ ಸವಾಲುಗಳನ್ನು ಎದುರಿಸುತ್ತೀರಿ. ಆದರೂ, ಸಾಕಷ್ಟು ಸುಲಭವಾಗಿ ಈ ಅಡೆತಡೆಗಳನ್ನು ನಿವಾರಿಸುತ್ತೀರಿ. ಈ ವರ್ಷ ಅದೃಷ್ಟದ ಬಲ ನಿಮ್ಮ ಸಾಧನೆಗೆ ಪೂರಕವಾಗಿರುವುದರಿಂದ ಯಾವುದೇ ಗುರಿಗಳನ್ನು ಇಟ್ಟುಕೊಂಡಿದ್ದರೂ ನನಸು ಮಾಡಿಕೊಳ್ಳುತ್ತೀರಿ. ಯಶಸ್ಸು, ಸಾಧನೆ ಹಾಗೂ ಬೆಳವಣಿಗೆಗೆ ಪೂರಕವಾದ ಸಾಕಷ್ಟು ಚಿಂತನೆಗಳನ್ನು ಕಾಣುತ್ತೀರಿ. ಹೊಸ ಉದ್ಯೋಗ ಅಥವಾ ಪ್ರಸ್ತಾವನೆಗಳು ನಿಮಗಾಗಿಯೇ ಕಾಯುತ್ತಿರುತ್ತವೆ. ಹಾಗಾಗಿ, ಯಾವುದೇ  ುರಿಗಳನ್ನಿಟ್ಟುಕೊಂಡಿದ್ದರೂ ಪೂರೈಸುವ ಸಂಕಲ್ಪ ಮಾಡಿ.

02.  ದೊಡ್ಡ ಯೋಜನೆಗೆ ಕೈ ಹಾಕಿ

ಈ ವರ್ಷ ನಿಮಗೆ ಉತ್ತಮವಾಗಿದೆ. ಹಾಗಾಗಿ, ಯಾವುದೇ ಗುರಿ-ಸಾಧನೆಗಳಿರಲಿ ದೊಡ್ಡ ಯೋಜನೆಯೊಂದಿಗೆ ಕೈಗೊಳ್ಳಿ. ಹೊಸ ಗೆಳೆಯರನ್ನು ಪಡೆಯುವ ಜೊತೆಗೆ ಸಾಮಾಜಿಕವಾಗಿ ಹೆಚ್ಚು ಗೆಳೆಯರನ್ನು ಹೊಂದುವುದರಿಂದ ನಿಮ್ಮ ಹಳೆಯ ಗೆಳೆಯರನ್ನು ನಿರ್ಲಕ್ಷಿಸದೆ, ಅವರಿಗಾಗಿ ಸಮಯ ಮೀಸಲಿಡಿ. ಒಬ್ಬಂಟಿಗರಿಗೆ ಸಂಗಾತಿಗಳು ಸಿಗುವ ಸಾಧ್ಯತೆ ಇದೆ. ಆದರೆ, ಸಂಬಂಧಗಳು ಉದ್ಯಮ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ಅಗತ್ಯ. ಮುಖ್ಯವಾಗಿ ಯಾವುದೇ ಸಂಕಲ್ಪಗಳನ್ನು ಕೈಗೊಂಡರೂ ಅದೃಷ್ಟ ನಿಮ್ಮ ಪರವಾಗಿರಲಿದೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಿಕೊಳ್ಳುವ ಹಟ ತೊಡಬೇಕಷ್ಟೇ. ನೀವೇನೇ ಅಂದುಕೊಂಡರೂ ಅದನ್ನು ರಾಜಮಾರ್ಗದಲ್ಲಿ ಈಡೇರಿಸಿಕೊಳ್ಳುತ್ತೀರಿ.

03.  ಅದೃಷ್ಟವಂತರು ನೀವು!

ಈ ವರ್ಷ ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇ ಹೊಸ ಯೋಜನೆ, ಸಾಧನೆಗೆ ಕೈ ಹಾಕಿದರೂ ಅದೃಷ್ಟ ಪ್ರಮುಖ ಪಾತ್ರ ವಹಿಸುತ್ತದೆ. ಇದೆಲ್ಲವೂ ನೀವು ಸಮಯವನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಈ ವರ್ಷ ನೀವು ಹೆಚ್ಚಿನ ಭಾವನಾತ್ಮಕ ಚಟುವಟಿಕೆಗಳಿಂದ ಇರುವುದರಿಂದ ನಿಮ್ಮ ಅಮೂಲ್ಯವಾದ ಸಮಯ ಹಾಗೂ ಸಾಮರ್ಥ್ಯ ಅನವಶ್ಯಕ ಕೆಲಸಗಳಿಗೆ ವಿನಿಯೋಗವಾಗದಂತೆ ಎಚ್ಚರಿಕೆ ವಹಿಸಿ. ಯಾವುದೇ ಹಳೆಯ ಕನಸು ಹಾಗೂ ಗುರಿಗಳನ್ನು ಪೂರೈಸಿಕೊಳ್ಳುವ ಸಂಕಲ್ಪ ತೊಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವೈಯಕ್ತಿಕವಾಗಿ ಈ ವರ್ಷ ಹಲವಾರು ಬದಲಾವಣೆಗಳನ್ನು ಕಾಣುತ್ತೀರಿ. ಆದರೆ, ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಷ್ಟೆ.

04.  ಉದ್ಯೋಗ, ಆರೋಗ್ಯಕ್ಕೆ ಆದ್ಯತೆ

ಈ ವರ್ಷ ನಿಮಗೆ ಯಶಸ್ಸು ಸಿಗಬೇಕೆಂದರೆ ಸಾಕಷ್ಟು ದೃಢಸಂಕಲ್ಪ ಮತ್ತು ಶ್ರಮವನ್ನು ವಹಿಸಬೇಕು. ಸ್ಪರ್ಧೆಯಲ್ಲಿ ಕೌಶಲ್ಯ ಮತ್ತು ವೇಗವನ್ನು ವೃದ್ಧಿಸಿಕೊಂಡು ಅಪ್‌ಡೇಟ್ ಆಗುವುದು ಅವಶ್ಯಕ. ಹಾಗೆಯೇ, ದೃಢ ಸಂಕಲ್ಪವನ್ನು ಆಗಾಗ ಪುನರ್‌ಮನನ ಮಾಡಿಕೊಂಡು ಮುಂದುವರೆಯುವುದು ಯಶಸ್ಸಿಗೆ ಹಾದಿಯಾಗುತ್ತದೆ. ನೀವು ಮಾಡಬೇಕು ಎಂದುಕೊಂಡಿರುವ ಕೆಲಸದ ಬದ್ದೆ ದೃಢತೆ ಇರಲಿ. ನಿಮ್ಮ ಗುರಿಯಲ್ಲಿ ನಿಚ್ಚಳತೆ, ಸ್ಪಷ್ಟತೆ ಹಾಗೂ ನಿರಂತರತೆ ಕಾಯ್ದುಕೊಂಡರೆ ಉತ್ತಮ. ಆದರೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ, ಉದ್ಯೋಗದ ಕಡೆಗೆ ಹೆಚ್ಚು ಗಮನ ಹರಿಸಿ. ಆದರೆ ಇದೇ ಸಂದರ್ಭದಲ್ಲಿ ಅಷ್ಟೇ ಗಮನವನ್ನು ನಿಮ್ಮ ಆರೋಗ್ಯ ರಕ್ಷಣೆಯತ್ತಲೂ ಹರಿಸಿ. ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ.

05.  ಅಡ್ಡದಾರಿ ಹುಡುಕಬೇಡಿ

ಈ ವರ್ಷ ನೀವು ಶಾಂತಿ ಮತ್ತು ಸಂತೋಷದಿಂದಿರುತ್ತೀರಿ. ಹೊಸ ಆಯ್ಕೆ ಹಾಗೂ ಯೋಜನೆಗಳು ಎದುರುಗೊಳ್ಳುತ್ತವೆ. ಈ ಮೂಲಕ ಸರ್ವತೋಮುಖ ಅಭಿವೃದ್ಧಿ ಹಾಗೂ ಸಂತೋಷಕರ ಬೆಳವಣಿಗೆಗಳು ಕಾಣುತ್ತವೆ. ಈ ವರ್ಷ ತೆಗೆದುಕೊಳ್ಳುವ ಬುದ್ಧಿವಂತಿಕೆಯ ನಿರ್ಧಾರಗಳು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಅವುಗಳನ್ನು ಅಡ್ಡಮಾರ್ಗದಲ್ಲಿ ಈಡೇರಿಸಿಕೊಳ್ಳಲು ಚಿಂತಿಸದೆ, ನೇರವಾಗಿ ಮುನ್ನುಗ್ಗಿ. ನಿಮ್ಮ ಜ್ಞಾನವನ್ನು ಮತ್ತಷ್ಟು ಸಮೃದ್ಧಗೊಳಿಸಿಕೊಳ್ಳುವತ್ತ ಯೋಚಿಸಿ, ಉದ್ಯೋಗದ ಕಡೆಗೆ ಹೆಚ್ಚು ಗಮನ ಹರಿಸಿ. ಹೆಚ್ಚಿನ ಶ್ರಮ ಹಾಕಿದರೆ ಯಶಸ್ಸು ನಿಶ್ಚಿತ. ಇನ್ನು ಔದ್ಯೋಗಿಕ ಹಾಗೂ ವೈಯಕ್ತಿಕವಾಗಿ ನಿಮ್ಮಿಂದ ನಿಮ್ಮ ಸ್ನೇಹಿತರಿಗೆ ನೋವುಂಟಾಗುವ ಸಾಧ್ಯತೆ ಹೆಚ್ಚಿದ್ದು, ಒತ್ತಡದಿಂದ ಹಿಂದೆ ಸರಿಯದೆ ನಿರಂತರತೆ ಕಾಯ್ದುಕೊಳ್ಳಿ.

06. ಕೌಟುಂಬಿಕ ಜವಾಬ್ದಾರಿ ಹೆಚ್ಚು

ಸಾಮಾಜಿಕವಾಗಿ ಈ ವರ್ಷ ಪೂರ್ಣಪ್ರಮಾಣದಲ್ಲಿ ೬ ಅದೃಷ್ಟ ಸಂಖ್ಯೆಯವರಿಗೆ ಮೀಸಲಾಗಿರುತ್ತದೆ. ಸಾಕಷ್ಟು ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳು ನಿಮ್ಮ ಕೈಯಿಂದ ಆಗುತ್ತವೆ. ಇವು ವೈಯಕ್ತಿಕವಾಗಿ ನಿಮಗೆ ಸಹಾಯವಾಗಲಿವೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡು ನಿಭಾಯಿಸುವುದನ್ನು ಕಲಿತರೆ ಉತ್ತಮ. ನೀವು ಅಸಮರ್ಥರಾಗಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸಮಸ್ಯೆ ಬಂತು ಎಂದು ಕೈಕಟ್ಟಿ ಕುಳಿತುಕೊಳ್ಳದೇ ಅದನ್ನು ಹೋಗಲಾಡಿಸುವ ಮಾರ್ಗ ಕಂಡುಹಿಡಿಯಿರಿ. ಮತ್ತು ಆ ಮಾರ್ಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಿ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನೀವು ಪ್ರಮುಖ ಪಾತ್ರ ವಹಿಸುವುದರಿಂದ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಭಾವನಾತ್ಮಕವಾಗಿ ಈ ವರ್ಷ ಅದ್ಭುತವಾಗಿರಲಿದೆ.

07. ಕಷ್ಟದ ಕೆಲಸ ಮಾಡಿ ಖುಷಿ ಪಡಿ

ಈ ಸಂಖ್ಯೆಯವರು ಅಧಿಕ ಸಮಯ ಮತ್ತು ಶ್ರಮವನ್ನು ವೈಯಕ್ತಿಕ ವಿಕಾಸಕ್ಕಾಗಿ ವಿನಿಯೋಗಿಸುವುದು ಉತ್ತಮ. ನಿಮ್ಮ ಹತ್ತಿರದವರಿಗಾಗಿ ಸಮಯ ಮೀಸಲಿಡುವುದನ್ನೂ ಮರೆಯಬೇಡಿ. ಒತ್ತಡದ ನಡುವೆಯೂ ಆರೋಗ್ಯ ಮತ್ತು ಕೆಲಸವನ್ನು ಸಮನಾಗಿ ಸರಿದೂಗಿಸಿಕೊಂಡು ಹೋಗಿ. ಕೆಲವು ಸಂದರ್ಭದಲ್ಲಿ ನಿರ್ವಹಿಸುವ ಕಾರ್ಯದಲ್ಲಿ ಹೆಚ್ಚಿನ ಉಂಚಾಗಬಹುದು. ಆದರೆ ಇಂತಹ ಒತ್ತಡಕ್ಕೆಲ್ಲಾ ಎದೆಗುಂದದಿರಿ. ಏಕೆಂದರೆ ಒತ್ತಡ ನಿಮ್ಮ ಸಂಕಲ್ಪ ಮತ್ತು ಗುರಿಗಳನ್ನು ಹೆಚ್ಚಿನ ಶ್ರಮ ಹಾಕಿದರೆ ಖಂಡಿತ ಪೂರೈಸಿಕೊಳ್ಳುವಿರಿ. ಯಾವುದೇ ಅನುಮಾನಗಳಿದ್ದರೂ ಇತರರೊಂದಿಗೆ ಚರ್ಚಿಸಿ ನಿವಾರಿಸಿಕೊಳ್ಳಿ. ನಿಮಗೆ ಕ್ರಿಯಾಶೀಲ ಎನಿಸುವ ಹಾಗೂ ಇಷ್ಟವಾದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಹೆಚ್ಚು ಸಂತೋಷ ಕಾಣುವಿರಿ.

08. ಹಳೆ ಕನಸು ಈ ವರ್ಷ ನನಸು

ನಿಮ್ಮ ಗುರಿ ಮುಟ್ಟಲು ಸಾಕಷ್ಟು ಶ್ರಮ ಹಾಕಲೇಬೇಕು. ಕಡಿಮೆ ಅವಧಿಯ ವಿಶ್ರಾಂತಿ ನಿಮ್ಮ ಪಾಲಿನದಾಗಲಿದೆ. ಸ್ಪರ್ಧೆ ಮತ್ತು ಕೆಲಸದ ಒತ್ತಡ ಹೆಚ್ಚಿರುವುದರಿಂದ ಗಂಭೀರ ಚಿಂತನೆ ಮತ್ತು ಯೋಜನೆಗಳಲ್ಲಿ ತೊಡಗಿಸಿಕೊಳ್ಳಿ. ವಿಶೇಷವಾಗಿ ಹಿಂದಿನ ವರ್ಷ ಕೈಬಿಟ್ಟ ಕೆಲಸಗಳು ಈ ವರ್ಷ ಕೈಗೂಡಲಿವೆ. ಹಿಂದಿನ ವರ್ಷ ಕೈಗೂಡದ ಕನಸು ಯೋಜನೆಗಳನ್ನು ಮುಂದುರೆಸಿದರೆ ಯಶಸ್ಸು ನಿಶ್ಚಿತ. ಈ ನಿಟ್ಟಿನಲ್ಲಿ ನೀವು ಹೆಚ್ಚು ಕ್ರಿಯಾಶೀಲರಾಗಬೇಕೇ ಹೊರತು, ಈ ಹಿಂದೆ ಯಶಸ್ಸು ಸಿಗಲಿಲ್ಲ ಎಂದು ಬೇಸರಿಸಿಕೊಳ್ಳದೇ ಮುಂದುವರಿಯಿರಿ. ಅರ್ಧಕ್ಕೆ ನಿಂತ ಕೆಲಸಗಳಲ್ಲಿ ಹಿಂದಿನ ವರ್ಷದ ಶ್ರಮ ಈ ವರ್ಷ ನಿಮ್ಮ ನೆರವಿಗೆ ಬರಲಿದೆ. ವೈಯಕ್ತಿಕವಾಗಿ ಈ ವರ್ಷ ನಿಮಗೆ ಸಾಕಷ್ಟು ಅದೃಷ್ಟಕಾರಿಯಾಗಿರಲಿದೆ. ಶ್ರಮಜೀವಿಗಳಿಗೆ ಅದೃಷ್ಟ ಖುಲಾಯಿಸಲಿದೆ.

09.  ಸ್ನೇಹಿತರಿದ್ದಾರೆ ಡೋಂಟ್ ವರಿ!

ಈ ಸಂಖ್ಯೆಯವರಿಗೆ 9 ವರ್ಷದ ವೃತ್ತಾಂತ ಮರುಘಟಿಸುವುದರಿಂದ ಹಿಂದಿನ ವರ್ಷದ ಸಾಧನೆಗಳಿಂದ ಪಡೆದದ್ದನ್ನು ಸಾಮಾಜಿಕ ಕೆಲಸಗಳಿಗಾಗಿ ಮೀಸಲಿಡುತ್ತಾರೆ. ನಿಮ್ಮ ಸಂಪಾದನೆಯ ಒಂದಷ್ಟು ಭಾಗವನ್ನು ಚಾರಿಟಿ ಮತ್ತಿತರ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತೀರಿ. ಹಿಂದಿನ ವರ್ಷಗಳ ನ್ಯೂನತೆ ಮತ್ತು ಅಪೂರ್ಣ ಯೋಜನೆಗಳನ್ನು ಭವಿಷ್ಯದ ದೃಷ್ಟಿಯಿಂದ ತಲುಪಲು ಪ್ರಯತ್ನಿಸಿ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ನಿಮ್ಮ ಗುರಿ ಮತ್ತು ಯೋಜನೆಗಳನ್ನು ತಲುಪಲು ಉತ್ತಮ ವರ್ಷ. ನೀವು ನಿಮ್ಮ ಆದಾಯದ ಕೆಲವು ಭಾಗವನ್ನು ದಾನಮಾಡಿದರೆ ನಿಮಗೆ ಗೆಲುವು ಸಿಗುತ್ತದೆ. ಇದರೊಂದಿಗೆ ಯಶಸ್ಸು ಖಂಡಿತ.ಸ್ನೇಹಿತರಿಂದ ಹೆಚ್ಚಿನ ನೆರವು ದೊರೆಯಲಿದೆ. ಸಮಾಜ ಸೇವಕರು, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅದೃಷ್ಟದ ವರ್ಷ.

Comments 0
Add Comment

    Related Posts