ಪಟನಾ[ಜೂ.18]: ಮೆದುಳಿನ ಉರಿಯೂತ ಕಾಯಿಲೆಗೆ ಬಿಹಾರದಲ್ಲಿ ನೂರಾರು ಮಕ್ಕಳು ಸಾವನ್ನಪ್ಪಿದ್ದು, ಈ ಕುರಿತು ಚರ್ಚೆಗೆ ಆಯೋಜಿಸಿದ್ದ ಸಭೆಯಲ್ಲಿ ಸಚಿವರು ಭಾರತ- ಪಾಕ್‌ ಪಂದ್ಯದ ಸ್ಕೋರ್‌ ಎಷ್ಟುಎಂದು ಕೇಳಿದ ಘಟನೆ ಮುಜ್ಫಫರ್‌ನಗರದಲ್ಲಿ ಭಾನುವಾರ ನಡೆದಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಬಲಿಯಾದ ಮುಜಫ್ಫರ್‌ನಗರ ಆಸ್ಪತ್ರೆಗೆ ಕೇಂದ್ರ ಸಚಿವ ಹರ್ಷವರ್ಧನ್‌ಸಿಂಗ್‌ ಅವರು ಭೇಟಿ ನೀಡಿ ಬಂದ ಬಳಿಕ ಸಭೆಯೊಂದನ್ನು ಆಯೋಜಿಸಿದ್ದರು.

ಈ ವೇಳೆ ಸಭೆಯಲ್ಲಿ ಹಾಜರಿದ್ದ ಬಿಹಾರದ ಆರೋಗ್ಯ ಖಾತೆ ಸಚಿವ ಮಂಗಲ್‌ ಪಾಂಡೆ, ಭಾರತ- ಪಾಕಿಸ್ತಾನ ನಡುವಣ ಪಂದ್ಯದ ಸ್ಕೋರ್‌ ಎಷ್ಟುಆಯ್ತು ಎಂದು ಕೇಳುವ ಮೂಲಕ ತಮ್ಮ ಬೇಜವಾಬ್ಧಾರಿಯ ಪರಮಾವಧಿ ಮರೆದಿದ್ದಾರೆ.