ನಗರದ ಬುದ್ಧಿಜೀವಿಗಳು ಅಪನಗದೀಕರಣವನ್ನು ಸರಿಯಾಗಿ ಗ್ರಹಿಸಲಿಲ್ಲ: ಮೂರ್ತಿ

First Published 22, Mar 2018, 12:37 PM IST
What infosys Narayana Murthy says about note ban
Highlights

2016ರಲ್ಲಿ ಜಾರಿಗೊಳಿಸಿದ ಅಪನಗದೀಕರಣದ ಕಲ್ಪನೆಯನ್ನು ನಗರದ ಬುದ್ಧಿಜೀವಿಗಳು ಸರಿಯಾಗಿ ಗ್ರಹಿಸಲಿಲ್ಲ. ಆದರೆ, ಗ್ರಾಮೀಣ ಭಾಗದ ಜನರು ಅದನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ ಎಂದು ಇಸ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತಾ: 2016ರಲ್ಲಿ ಜಾರಿಗೊಳಿಸಿದ ಅಪನಗದೀಕರಣದ ಕಲ್ಪನೆಯನ್ನು ನಗರದ ಬುದ್ಧಿಜೀವಿಗಳು ಸರಿಯಾಗಿ ಗ್ರಹಿಸಲಿಲ್ಲ. ಆದರೆ, ಗ್ರಾಮೀಣ ಭಾಗದ ಜನರು ಅದನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ ಎಂದು ಇಸ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2016ರ ಅಪನಗದೀಕರಣದ ವಿಷಯವಾಗಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ನಾರಾಯಣ ಮೂರ್ತಿ, ‘ನಾನು ಆರ್ಥಿಕ ತಜ್ಞನಲ್ಲ. ಆದರೆ, ನಾನು ನೋಡಿರುವಂತೆ ನಗರದ ಬುದ್ಧಿಜೀವಿಗಳು ಅಪನಗದೀಕರಣದ ಕಲ್ಪನೆಯನ್ನು ಸಮರ್ಪಕವಾಗಿ ಗ್ರಹಿಸಲಿಲ್ಲ. ಆದರೆ, ಗ್ರಾಮೀಣ ಭಾಗದ ಜನರು ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರು’ ಎಂದು ಹೇಳಿದ್ದಾರೆ. ‘ನಾನು ಆರ್ಥಿಕ ವಿಷಯದಲ್ಲಿ ತಜ್ಞನಾಗಿರದೇ ಇರುವುದರಿಂದ ಅಪನಗದೀಕರಣವನ್ನು ಜಾರಿಗೊಳಿಸಿದ್ದರ ಹಿಂದಿರುವ ತರ್ಕ ಏನು ಎಂಬುದು ನನಗೂ ಅರ್ಥ ಆಗಿಲ್ಲ. ಇದಕ್ಕೆ ತಜ್ಞರು ಮಾತ್ರ ಉತ್ತರ ನೀಡಬೇಕು. ನೀವು ಈ ವಿಷಯವಾಗಿ ತಜ್ಞರ ಜೊತೆ ಚರ್ಚಿಸಬೇಕು’ ಎಂದು ಹೇಳಿದ್ದಾರೆ.

ಇದೇ ವೇಳೆ ದೇಶದ ಶೇ.75ರಷ್ಟುಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ, 8 ತರಗತಿಗೆ ಕಾಲಿಡುವ ಮುನ್ನವೇ ವ್ಯಾಸಂಗವನ್ನು ತ್ಯಜಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

loader