ಆಷಾಢ ಮುಗಿದ ನಂತರ ಗೌಡರು ತಮ್ಮ ನವೀಕೃತಗೊಂಡ ವಾಸ್ತು ಪ್ರಕಾರದ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಅಂದ ಹಾಗೆ ಕಳೆದ 2 ವರ್ಷಗಳಿಂದ ದೇವೇಗೌಡರು ಅಧಿವೇಶನದಲ್ಲಿ ಎರಡೋ ಮೂರೋ ದಿನ ದಿಲ್ಲಿಯಲ್ಲಿ ಇರುತ್ತಿದ್ದರು
ಕರ್ನಾಟಕದ ಭವನದ ನಾಲ್ಕನೇ ಮಹಡಿ ನಿಯಮದ ಪ್ರಕಾರ ಮುಖ್ಯಮಂತ್ರಿಗಳಿಗೆ ಮಾತ್ರ ಮೀಸಲು. ಆದರೆ ಕಳೆದ 15 ದಿನಗಳಿಂದ ದೇವೇಗೌಡರು ೪ನೇ ಮಹಡಿಯ ಒಂದು ಕೋಣೆ ಮತ್ತು ಮುಖ್ಯಮಂತ್ರಿಗಳ ಕಚೇರಿಯ ಒಂದು ಭಾಗವನ್ನು ತಮ್ಮ ಕಚೇರಿಯಾಗಿ ಉಪಯೋಗಿಸುತ್ತಿದ್ದಾರೆ. ಆಷಾಢ ಮಾಸ ಮುಗಿಯುವವರೆಗೆ ದೇವೇಗೌಡರು ಮುಖ್ಯಮಂತ್ರಿ ಪುತ್ರನ ದಿಲ್ಲಿ ಸೂಟ್‌ನ ಹೊರ ಭಾಗವನ್ನು ಉಪಯೋಗಿಸಲಿದ್ದಾರೆ.
ಆಷಾಢ ಮುಗಿದ ನಂತರ ಗೌಡರು ತಮ್ಮ ನವೀಕೃತಗೊಂಡ ವಾಸ್ತು ಪ್ರಕಾರದ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಅಂದ ಹಾಗೆ ಕಳೆದ 2 ವರ್ಷಗಳಿಂದ ದೇವೇಗೌಡರು ಅಧಿವೇಶನದಲ್ಲಿ ಎರಡೋ ಮೂರೋ ದಿನ ದಿಲ್ಲಿಯಲ್ಲಿ ಇರುತ್ತಿದ್ದರು. ಆದರೆ ಈಗ ಸೋಮವಾರದಿಂದ ಶುಕ್ರವಾರ ಸದನದಲ್ಲಿ ಕುಳಿತುಕೊಂಡು ಎಲ್ಲವನ್ನೂ, ಎಲ್ಲರನ್ನು ಅಲಿಸುತ್ತಾರೆ. ದೇವೇಗೌಡರ ಮನಸ್ಸಿನಲ್ಲಿ ಏನಿದೆ ಎಂದು ಅರಿಯುವುದು ಕಷ್ಟ ಬಿಡಿ.
ಚುನಾವಣೆ ಮತ್ತು ಟಿಕೆಟ್
ಮಾನ್ಸೂನ್ ಅಧಿವೇಶನಕ್ಕೆ ದಿಲ್ಲಿಗೆ ಬಂದಿರುವ ಕರ್ನಾಟಕದ ಸಂಸದರು ದಿಲ್ಲಿ ಪತ್ರಕರ್ತರು ಸಿಕ್ಕರೆ ಪಕ್ಕಕ್ಕೆ ಎಳೆದುಕೊಂಡು ಹೋಗಿ ಕೇಳುವ ಪ್ರಶ್ನೆ, ‘ಯಾವಾಗ ಎಲೆಕ್ಷನ್ನು? ಬೇಗ ಆಗುತ್ತಾ ಅಥವಾ ಎಂದಿನಂತೇ ಆಗುತ್ತಾ? ಇದಕ್ಕೆ ಕಾರಣ? ಎಂದೆಲ್ಲಾ ಪ್ರಶ್ನೋತ್ತರ ನಡೆಸುವ ಸಂಸದರಿಗೆ ಚುನಾವಣಾ ಜ್ವರ ಶುರುವಾಗಿದೆ. ಇನ್ನು ರಾಜ್ಯದ ಬಿಜೆಪಿ ಸಂಸದರಿಗೆ ಬಿಜೆಪಿ ಆಂತರಿಕ ಸರ್ವೇ ಟೆನ್ಷನ್ ಶುರು ಆಗಿದ್ದು, ಟಿಕೆಟ್ ಸಿಗುತ್ತಾ ಇಲ್ಲವಾ ಎಂದು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.
ಕೆಲ ಬಿಜೆಪಿ ಸಂಸದರು ಆರ್‌ಎಸ್‌ಎಸ್ ಕಚೇರಿಗೆ ಸುತ್ತು ಹೊಡೆಯ ತೊಡಗಿದ್ದು ಇನ್ನು ಕೆಲವು ಕಾಯಂ ನಿರುತ್ಸಾಹಿ ಸಂಸದರು ವಿಧೇಯ ರಂತೆ ದಿನವೀಡಿ ಸದನದಲ್ಲಿ ಕುಳಿತುಕೊಂಡು ಮೋದಿ ಮತ್ತು ಶಾ ಕಣ್ಣಿಗೆ ಬಿದ್ದರೆ ಸಾಕು ಎಂದೆಲ್ಲ ಹರಸಾಹಸ ಪಡುತ್ತಿದ್ದಾರೆ. ನಮ್ಮ ದೇಶದಲ್ಲಿಯೇ ಇರಬೇಕು ಚುನಾವಣೆಗೆ ಒಂದು ವರ್ಷ ಮುಂಚೆಯೇ ಜಾತ್ರೆಯ ನಾನಾ ತಯಾರಿಗಳು ಆರಂಭವಾಗುವುದು.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
