ಮಡದಿಯ ನೆನಪಿಗಾಗಿ ಶ್ವಾನ ಆಸ್ಪತ್ರೆ ಕಟ್ಟಿಸಿದ ಸಚಿವ

West Bengal Minister to Build Hospital for Dogs in Memory of wife
Highlights

ಶಹಜಹಾನ್ ತನ್ನ ಮಡದಿ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನೇ ಕಟ್ಟಿಸಿದರೆ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಕಳೆದ ವರ್ಷ ವಿಧಿವಶರಾದ ತಮ್ಮ ಪ್ರೀತಿಯ ಪತ್ನಿಯ ನೆನಪಿಗಾಗಿ ನಾಯಿಗಳ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ.

ಕೋಲ್ಕತಾ (ಜ.24): ಶಹಜಹಾನ್ ತನ್ನ ಮಡದಿ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನೇ ಕಟ್ಟಿಸಿದರೆ, ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಕಳೆದ ವರ್ಷ ವಿಧಿವಶರಾದ ತಮ್ಮ ಪ್ರೀತಿಯ ಪತ್ನಿಯ ನೆನಪಿಗಾಗಿ ನಾಯಿಗಳ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ.

 ‘ನಾಯಿಗಳ ಮೇಲೆ ಅತೀವವಾದ ಪ್ರೀತಿ, ಕರುಣೆ ಇಟ್ಟುಕೊಂಡಿದ್ದ ತನ್ನ ಪ್ರೀತಿಯ ಪತ್ನಿಗೆ ನೆನಪಿಗಾಗಿ, ನಾಯಿ ಆಸ್ಪತ್ರೆ ಕಟ್ಟಿಸುತ್ತಿದ್ದೇನೆ. ಇದರ ಹೊರತಾಗಿ ನನ್ನ ಪತ್ನಿಗೆ ಗೌರವ ಸಲ್ಲಿಸಲು ಅನ್ಯ ಮಾರ್ಗಗಳು ನನಗಿಲ್ಲ,’ ಎಂದಿದ್ದಾರೆ.

‘ನನ್ನ ಪತ್ನಿ ಶ್ವಾನ ಪ್ರಿಯೆಯಾಗಿದ್ದರು. ಅವುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಈ ಮೂಲಕ ಶ್ವಾನಾಸ್ಪತ್ರೆ ಉದ್ಘಾಟಿಸುವ ಮೂಲಕ ಗೌರವ ಸಲ್ಲಿಸುವುದಾಗಿ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

loader