ಬೆಳಗಾವಿ: ಕಾಂಗ್ರೆಸ್ ಪಕ್ಷವನ್ನು ಕೆಡವಲು ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆ. 

ಆದರೆ ಇದೇವೇಳೆ ಸವದತ್ತಿ ಮಾಜಿ ಶಾಸಕ ದಿ.ವೆಂಕರಡ್ಡಿ ಕಾಂಗ್ರೆಸ್ ಪಕ್ಷ ಉಳಿಸಲು ಎಂಟು ವರ್ಷ ಜೈಲಿಗೆ ಹೋಗಿದ್ದರು ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. 

ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ಸಂತ ಸಂಪ್ರ ದಾಯ ಪಾಠಶಾಲೆಗೆ ಅಡಿಗಲ್ಲು ಹಾಕಿದ ನಂತರ ಮಾತನಾಡಿದ ಅವರು ಒಂದೇ ಸಮುದಾಯದವರಾದರೂ ಬೇರೆ ಬೇರೆ ಪಕ್ಷದಲ್ಲಿದ್ದುಕೊಂಡು ಆ ಪಕ್ಷಗಳ ನಿಲುವಿಗೆ ಹೋರಾಟ ಮಾಡಿದ್ದಕ್ಕೆ ಇದು ಸಾಕ್ಷಿ ಎಂದರು.