ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಜೆಡಿಎಸ್‌ಗೆ ಬರುವುದಾದರೆ ಅವರಿಗೆ ಮುಕ್ತ ಸ್ವಾಗತವಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಜೆಡಿಎಸ್‌ಗೆ ಬರುವುದಾದರೆ ಅವರಿಗೆ ಮುಕ್ತ ಸ್ವಾಗತವಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರಿಗೆ ಸಿಲಿಕಾನ್‌ ಸಿಟಿ ಖ್ಯಾತಿ ತಂದು ಕೊಟ್ಟಎಸ್‌.ಎಂ. ಕೃಷ್ಣ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ.

ರಾಷ್ಟ್ರೀಯ ಪಕ್ಷಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತಿವೆ. ಅಲ್ಲಿ ಹಿರಿಯರಿಗೆ ಬೆಲೆ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವಾಗ ವ್ಯಕ್ತಿಗಳನ್ನು ಆಸಕ್ತಿಯಿಂದ ಸೇರಿಸಿಕೊಳ್ಳುತ್ತಾರೆ. ನಂತರ ಅವರಿಗೆ ಯಾವುದೇ ಸೂಕ್ತ ಆದ್ಯತೆ ನೀಡುವುದಿಲ್ಲ ಎಂದು ದೂರಿದರು.

ಎಸ್‌.ಎಂ.ಕೃಷ್ಣ ಅವರ ಆಶೀರ್ವಾದ ಸ್ವೀಕರಿಸಲು ನಾನು ಸದಾ ಸಿದ್ಧ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಸ್‌.ಎಂ.ಕೃಷ್ಣರಂಥ ಮುತ್ಸದ್ದಿ ರಾಜಕಾರಣಿಗಳು ಹಿರಿಯರು ಜೆಡಿಎಸ್‌ಗೆ ಬಂದ್ರೆ ತುಂಬು ಹೃದಯದ ಸ್ವಾಗತವಿದೆ ಎಂದು ಹೇಳಿದರು.