ಮದುವೆಗೂ ಒಂದು ವರ್ಷ ಮುನ್ನವೇ ನನ್ನ ನಿಶ್ಚಿತಾರ್ಥ ಆಗಿತ್ತು. ಅದೊಂದು ಸಂತಸದ ಅನುಭವ. ದೆಹಲಿಯಲ್ಲಿದ್ದ ನನ್ನ ಭಾವೀಪತಿ ಸದಾ ನನ್ನ ಸಂಪರ್ಕದಲ್ಲಿದ್ದರು. ಆ ವರ್ಷ ನನ್ನ ತವರೂರು ಫುಲ್ಬನಿಯಲ್ಲಿ ಗ್ರ್ಯಾಂಡ್ ಆಗಿ ಮದುವೆ ನೆರವೇರಿತು. ಮದುವೆಯ ದಿನ ರಾತ್ರಿ ನನ್ನ ಪತಿ ನನಗೊಂದು ಗುಟ್ಟಿನ ಸುದ್ದಿ ಹೇಳಿದರು. ಅದೇನು ಗೊತ್ತಾ..? ಅದಾಗಲೇ ಅವರು ಮತ್ತೊಂದು ಹುಡುಗಿಯ ಜೊತೆ ಲಿವ್ ಇನ್ ಟುಗೆದರ್`ನಲ್ಲಿದ್ದರು.ಹಾಗಾಗಿಯೇ ದೆಹಲಿ ಅವರು ವಾಸವಿದ್ದ ಜಾಗಕ್ಕೆ ನನ್ನ ಕರೆದೊಯ್ದಿರಲಿಲ್ಲ. ಅವರ ವಿಶ್ವಾಸಘಾತುಕತನಕ್ಕೆ ನನಗೆ ದಿಗ್ಭ್ರಮೆಯಾಯ್ತು.

ಭುವನೇಶ್ವರ್(ಡಿ.02): ಇದು ನಿಜವಾದ ಮದುವೆನಾ..? ಈ ಪ್ರಶ್ನೆಯನ್ನ ಕಳೆದ 2 ವರ್ಷಗಳಿಂದ ನೂರಾರು ಬಾರಿ ಕೇಳಿಕೊಂಡಿದ್ದೇನೆ.

ಮದುವೆಗೂ ಒಂದು ವರ್ಷ ಮುನ್ನವೇ ನನ್ನ ನಿಶ್ಚಿತಾರ್ಥ ಆಗಿತ್ತು. ಅದೊಂದು ಸಂತಸದ ಅನುಭವ. ದೆಹಲಿಯಲ್ಲಿದ್ದ ನನ್ನ ಭಾವೀಪತಿ ಸದಾ ನನ್ನ ಸಂಪರ್ಕದಲ್ಲಿದ್ದರು. ಆ ವರ್ಷ ನನ್ನ ತವರೂರು ಫುಲ್ಬನಿಯಲ್ಲಿ ಗ್ರ್ಯಾಂಡ್ ಆಗಿ ಮದುವೆ ನೆರವೇರಿತು. ಮದುವೆಯ ದಿನ ರಾತ್ರಿ ನನ್ನ ಪತಿ ನನಗೊಂದು ಗುಟ್ಟಿನ ಸುದ್ದಿ ಹೇಳಿದರು. ಅದೇನು ಗೊತ್ತಾ..? ಅದಾಗಲೇ ಅವರು ಮತ್ತೊಂದು ಹುಡುಗಿಯ ಜೊತೆ ಲಿವ್ ಇನ್ ಟುಗೆದರ್`ನಲ್ಲಿದ್ದರು.ಹಾಗಾಗಿಯೇ ದೆಹಲಿ ಅವರು ವಾಸವಿದ್ದ ಜಾಗಕ್ಕೆ ನನ್ನ ಕರೆದೊಯ್ದಿರಲಿಲ್ಲ. ಅವರ ವಿಶ್ವಾಸಘಾತುಕತನಕ್ಕೆ ನನಗೆ ದಿಗ್ಭ್ರಮೆಯಾಯ್ತು.

ನೀವು ಬೇರೊಬ್ಬ ಹುಡುಗಿ ಜೊತೆ ಇದ್ದರೂ ನನ್ನನ್ನೇಕೆ ಮದುವೆ ಆಗಿದ್ದು ಎಂದು ಪ್ರಶ್ನಿಸಿದೆ. ಇದಕ್ಕೆ ಅವರಿಂದ ಬಂದ ಉತ್ತರ ಮತ್ತಷ್ಟು ಘಾಸಿಗೊಳಿಸಿತ್ತು. `ನನ್ನ ಕುಟುಂಬದ ಅನುಕೂಲಕ್ಕಾಗಿ ನಿನ್ನನ್ನ ಮದುವೆಯಾದೆ, ನೀನು ಅವರ ಜೊತೆಯೇ ಇದ್ದು ಅವರನ್ನ ನೋಡಿಕೋ. ನನ್ನ ಜೀವನ ದೆಹಲಿಯ ನನ್ನ ಪ್ರೀತಿಯ ಹುಡುಗಿ ಜೊತೆ' ಎಂದು ನೇರ ಉತ್ತರ ಕೊಟ್ಟರು.

ನಿಶ್ಚಿತಾರ್ಥದ ಬಳಿಕ, ನಾನು ಬೇರೆ ಹುಡುಗಿಯನ್ನ ಕರೆತರುತ್ತೇನೆ. ನನ್ನನ್ನ ಬಿಟ್ಟುಬಿಡು ಎಂದು ರೇಗಿಸುತ್ತಿದ್ದರೆ ಅದು ತಮಾಷೆ ಎಂದುಕೊಂಡೆ. ಈಗ ನಿಜವಾಗಿದೆ. ನನ್ನನ್ನ ಬಿಟ್ಟು ಗಂಡ ಹೊರಟುಹೋಗಿದ್ದಾನೆ. 2 ವಾರವೂ ನನ್ನ ಜೊತೆ ಕಳೆಯಲಿಲ್ಲ. ಇದ್ದ ಕೆಲ ದಿನ ಚಿಕ್ಕ ಚಿಕ್ಕ ವಿಷಯಕ್ಕೂ ಜಗಳ ತೆಗೆಯುತ್ತಿದ್ದ.

ಹಲವು ದಿನಗಳ ಕಾಲ ಆತನ ಸಂಬಂಧದ ರಹಸ್ಯ ಗುಪ್ತವಾಗಿಯೇ ಇಟ್ಟೆ. ನಾನು ಎಷ್ಟೇ ಕರೆಮಾಡಿದರೂ ಸ್ವೀಕರಿಸಲಿಲ್ಲ. ಫೋನ್ ಮಾಡಿ ಮನೆಯವರೆಲ್ಲರ ಜೊತೆ ಮಾತನಾಡುತ್ತಿದ್ದ ಗಂಡನಿಗೆ ನಾನು ನೆನಪಿಗೆ ಬರಲಿಲ್ಲ. ಅಷ್ಟೇ ನಾನು ಖಿನ್ನತೆಗೆ ದೂಡಲ್ಪಟ್ಟೆ. ಅವನ ಸ್ವಾರ್ಥಕ್ಕಾಗಿ ನನ್ನನ್ನ ಬಳಸಿಕೊಳ್ಳುತ್ತಿರುವುದು ಇನ್ನಿಲ್ಲದ ಆಕ್ರೋಶ ತಂದಿತ್ತು. ಈ ಮದುವೆ ಬಂಧನದಲ್ಲಿ ಮುಂದುವರೆಯುವುದು ಬೇಡವೆನ್ನಿಸಿತು. ಆದರೆ, ವಿಚ್ಛೇದನಾ ಬಹಳ ಸಮಯ ಹಿಡಿಯುತ್ತದೆಂದು ಬೇರೆ ದಾರಿ ಹುಡುಕಿದೆ.

ನನ್ನ ಸಂಬಂಧಿಗಳ ಸಲಹೆ ಮೇರೆಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ನನಗೆ ಮೋಸ ಮಾಡಿದ ಗಂಡ ಮತ್ತು ಅವನ ಕುಟುಂ ವಿರುದ್ಧ ದೂರಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗಂಡನ ಕುಟುಂಬ ಪ್ರತಿ ದೂರು ದಾಖಲಿಸಿತು. ಈ ಎಲ್ಲ ಪ್ರಯಾಸದ ಬಳಿಕ ಭುವನೇಶ್ವರ್`ಗೆ ತೆರಳಿ ಕಂಧಮಾಲ್ ಪೊಳಿಸ್ ವರಿಷ್ಠಾಧಿಕಾರಿಯನ್ನ ಭೇಟಿ ಮಾಡಿದೆ. ಅಲ್ಲಿ ನನ್ನನ್ನ ಮಹಿಳಾ ಸಹಾಯವಾಣಿಗೆ ಕಳುಹಿಸಲಾಯ್ತು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಗ್. ಮಹಿಳಾ ಸಹಾಯವಾಣಿ ಜೊತೆ ಸೇರಿ ಅವರ ಸಲಹೆ ಮೇರೆಗೆ ಗಟ್ಟಿ ಮನಸ್ಸು ಮಾಡಿ ವಿಚ್ಚೇದನಕ್ಕೆ ಅರ್ಜಿ ಹಾಕಲು ನಿರ್ಧರಿಸಿದೆ. ಅಷ್ಟರಲ್ಲಿ ಮಹಿಳಾ ಸಹಾಯವಾಣ ಸದಸ್ಯರು ನನ್ನ ಗಂಡ ಮತ್ತು ಕುಟುಂಬ ಸದಸ್ಯರಿಗೆ ಸಮನ್ಸ್ ನೀಡಿದರು. ಆದರೆ, ಮನೆಯ ಹಿರಿಯನೊಬ್ಬನನ್ನ ಮಾತ್ರ ಕಳುಹಿಸಿಇದ್ದರು. ಸಹಾಯವಾಣಿಗೆ ಬಂದ ಆತನೂ ನಟಿಸಲು ಶುರುಮಾಡಿದ್ದ. ಆತನ ಕಪಟತನ ಒಪ್ಪದ ನನ್ನ ಗೆಳತಿಯರು ಛೀಮಾರಿ ಹಾಕಿ ಒಪ್ಪಂದಕ್ಕೆ ಬಂದರು. ಮದುವೆಯಲ್ಲಿ ಕೊಟ್ಟ ಬಂಗಾರ, ಬಟ್ಟೆ, ಪೀಠೋಪಕರಣ ಎಲ್ಲವನ್ನೂ ಹಿಂದಿರುಗಿಸಬೇಕು. 20 ಸಾವಿರ ಜೀವನಾಂಶ ಕೊಡಬೇಕೆಂದು ತಾಕೀತು ಮಾಡಿದರು.

ಈಗ ನಾನು ಹೊಸ ಜೀವನ ನಡೆಸುತ್ತಿದ್ಧೇನೆ. ಎನ್`ಜಿಓ ನಡೆಸುವ ವ್ಯಕ್ತಿತ್ವ ವಿಕಸನದ ತರಗತಿಗಳನ್ನ ಅಟೆಂಡ್ ಮಾಡುತ್ತಿದ್ಧೇನೆ. ನಾನು ಸ್ವತಂತ್ರವಾಗಿ ಬದುಕುವ ನಿಶ್ಚಯ ಮಾಡಿದೆ. ಅಲ್ಲಿಂದ ಅವರ ಸಹಾಯ ಪಡೆದು ಹರಿದ್ವಾರದ ಆಶ್ರಮ ಸೇರಿದೆ. ವಿಚ್ಛೇದನಕ್ಕಾಗಿ ಕಾಯುತ್ತಿರುವ ನಾನು ಮುಂದೆ ನನ್ನ ಜೀವನ ರೂಪಿಸಿಕೊಳ್ಳುತ್ತೆನೆ. ನನ್ನ ಜೀವನದಲ್ಲಿ ಈಗ ಬೇರೊಬ್ಬರ ನಿರ್ಧಾರ ಅಗತ್ಯವಿಲ್ಲ.

 ಒರಿಸ್ಸಾದ ಗಂಡನಿಂದ ವಂಚನೆಗೊಳಗಾದ ನತದೃಷ್ಟ ಮಹಿಳೆಯೊಬ್ಬರ ಕಥೆ ವ್ಯಥೆ ಇದು. ಜಾಲತಾಣವೊಂದರಲ್ಲಿ ಪ್ರಕಟವಾದ ಈ ವರದಿಯ ಸಾರಾಂಶವನ್ನ ಿಲ್ಲಿ ನೀಡಿದ್ದೇವೆ.