ಬಿಜೆಪಿ ಅಶ್ವಮೇಧ ಕುದುರೆಯನ್ನು ನಾವು ಕಟ್ಟಿ ಹಾಕ್ತೇವೆ: ರೆಡ್ಡಿ

First Published 1, Apr 2018, 9:31 AM IST
We Will Ready To Fight
Highlights

ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ನಾವು ಕಟ್ಟಿಹಾಕುತ್ತೇವೆ. ಅವರನ್ನು ಸೋಲಿಸಿ ಕಾಂಗ್ರೆಸ್ ವಿಜಯಯಾತ್ರೆಯನ್ನು ದಕ್ಷಿಣ ಭಾರತದಿಂದಲೇ ಶುರು ಮಾಡುತ್ತೇವೆ

ಬೆಂಗಳೂರು: ಸುಳ್ಳಿನ ಮೂಲಕವೇ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ಕರ್ನಾಟಕದಲ್ಲಿ ನಾವು ಕಟ್ಟಿ ಹಾಕುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಆದರೆ ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ನಾವು ಕಟ್ಟಿಹಾಕುತ್ತೇವೆ. ಅವರನ್ನು ಸೋಲಿಸಿ ಕಾಂಗ್ರೆಸ್ ವಿಜಯಯಾತ್ರೆಯನ್ನು ದಕ್ಷಿಣ ಭಾರತದಿಂದಲೇ ಶುರು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

loader