ರಾಜ್ಯದಲ್ಲಿ ಈ ಭಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಾ.? ಹೀಗೊಂದು ಅನುಮಾನಕ್ಕೆ ಕಾರಣವಾಗಿರೋದು ಇಂದು ಕಾರ್ಯಕ್ರಮವೊಂದ್ರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ ಮಾತು.
ಬೆಂಗಳೂರು (ಸೆ.26): ರಾಜ್ಯದಲ್ಲಿ ಈ ಭಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಾ.? ಹೀಗೊಂದು ಅನುಮಾನಕ್ಕೆ ಕಾರಣವಾಗಿರೋದು ಇಂದು ಕಾರ್ಯಕ್ರಮವೊಂದ್ರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ ಮಾತು.
ಮಹಾಲಕ್ಷ್ಮಿ ಬಡಾವಣೆಯ ಅಭಿವೃಧ್ದಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಸಿಎಂ , ಜೆಡಿಎಸ್ ಶಾಸಕ ಗೋಪಾಲಯ್ಯಗೆ ಟಾಂಗ್ ಕೊಡ್ತಾ ಇವತ್ತು ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿ ನಾವು ನೀವು ಕೂಡಿ ಆಡಳಿತ ನಡೆಸೋಣ ಬಿಡ್ರೀ ಅಂತಾ ಹೇಳಿದರು. ಇದು ಮುಂದಿನ ಬಾರಿ ಜೆಡಿಎಸ್ ಜೊತೆಗೆ ಕೈ ಜೋಡಿಸುವ ಮುನ್ಸೂಚನೆಯಾ ಅನ್ನೋ ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ಅಭಿವೃಧ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದರು. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಜೆಡಿಎಸ್ ಶಾಸಕ ಗೋಪಾಲಯ್ಯರನ್ನು ಸಾಕಷ್ಟು ಕಾಲೆಳೆಯುತ್ತಿದ್ದರು. ಮುಂದಿನ ಬಾರಿ ಕೂಡಾ ನಾವೇ ಅಧಿಕಾರಕ್ಕೆ ಬರ್ತೀವಿ ಅಂದರು. ಇದಕ್ಕೆ ಗೋಪಾಲಯ್ಯ ಇಲ್ಲಾ ನಾವು ಬರ್ತೀವಿ ಅಂದ್ರು. ತಕ್ಷಣ ಪ್ರತಿಕ್ರಿಯಿಸಿದ ಸಿಎಂ ಹೋಗ್ಲಿ ಬಿಡ್ರೀ ಇಬ್ರೂ ಸೇರಿಯೇ ಆಡಳಿತ ನಡೆಸೋಣ ಅಂದ್ರು. ರಾಜ್ಯದಲ್ಲಿ ಈ ಭಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಾ.? ಹೀಗೊಂದು ಅನುಮಾನಕ್ಕೆ ಕಾರಣವಾಗಿರೋದು ಇಂದು ಕಾರ್ಯಕ್ರಮವೊಂದ್ರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ ಮಾತು.
