ರಾಷ್ಟ್ರಪತಿ ರಾಮನಾಥ್ ಕೋವಿಂದ ಟಿಪ್ಪುವನ್ನು ಹೊಗಳಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಅ.25): ರಾಷ್ಟ್ರಪತಿ ರಾಮನಾಥ್ ಕೋವಿಂದ ಟಿಪ್ಪುವನ್ನು ಹೊಗಳಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಷ್ಟ್ರಪತಿಗೆ ನಾವು ಭಾಷಣ ಬರೆದುಕೊಟ್ಟಿಲ್ಲ. ನಾವು ರಾಷ್ಟ್ರಪತಿಗೆ ಭಾಷಣ ಬರೆದುಕೊಡೋಕೆ ಆಗುತ್ತಾ? ಅವರೇ ಸಿದ್ದಪಡಿಸಿಟ್ಟುಕೊಂಡಿದ್ದ ಭಾಷಣ ಓದಿದ್ದಾರೆ. ಸರ್ಕಾರದ ಭಾಷಣ ಓದಲು ರಾಜ್ಯಪಾಲರ ಜಂಟಿ ಅಧಿವೇಶನ ಅಲ್ಲ. ಬಿಜೆಪಿಯವರಿಗೆ ತಿಳುವಳಿಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರ ಹೇಳಿಕೆಯಿಂದ ರಾಷ್ಟ್ರಪತಿಗೆ ಅವಮಾನ ಆಗುತ್ತಿದೆ. ರಾಷ್ಟ್ರಪತಿಯವರು ಸತ್ಯವನ್ನೇ ಹೇಳಿ ಹೋಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
