ಉತ್ತರ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಬಿಜೆಪಿ ಭಾರೀ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ನವದೆಹಲಿ (ಮಾ.11): ಉತ್ತರ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಬಿಜೆಪಿ ಭಾರೀ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಬಿಜೆಪಿಯ ಅಭೂತಪೂರ್ವ ಗೆಲುವನ್ನು ಎಂಜಾಯ್ ಮಾಡುತ್ತಿದ್ದೇನೆ. ಸಸಮಾಜದ ಎಲ್ಲಾ ವರ್ಗದ ಜನರು ಬೆಂಬಲ ಸೂಚಿಸಿದ್ದಾರೆ. ಯುವಜನತೆಯಿಂದ ಬಂದ ಬೃಹತ್ ಬೆಂಬಲದಿಂದ ಹರ್ಷವಾಗುತ್ತಿದೆ. ಬಿಜೆಪಿ ಕಾರ್ಯಕರ್ತರಿಗೆ ಸೆಲ್ಯೂಟ್ ಹೊಡೆಯುತ್ತೇನೆ. ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ಕಾರ್ಯಕರ್ತರು ದಣಿವರಿಯದೇ ಕೆಲಸ ಮಾಡಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ.

ಅದೇ ರೀತಿ ಪಕ್ಷದ ಕಚೇರಿಯ ಹೊಣೆಗಾರಿಕೆ ಹೊತ್ತಿರುವ ಅಮಿತ್ ಶಾ ಮತ್ತು ರಾಜ್ಯ ಘಟಕಗಳನ್ನು ಅಭಿನಂದಿಸಿದ್ದಾರೆ.

ನಾವು ಏನೆಲ್ಲಾ ಒಳ್ಳೆಯ ಕೆಲಸ ಮಾಡಿದ್ದೇವೆಯೋ ಅದು ದೇಶದ ಜನರ ಹಿತಕ್ಕಾಗಿ. ನಮ್ಮ ಪಕ್ಷ 125 ಕೋಟಿ ಭಾರತೀಯರ ಮೇಲೆ ನಂಬಿಕೆ ಇಟ್ಟಿದೆ ಎಂದಿದ್ದಾರೆ.