ಪ್ರಧಾನಿ ನರೇಂದ್ರ ಮೋದಿ 8 ನೇ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಇಂದು ಉದ್ಘಾಟಿಸಿ, ಭಾರತ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಡಿಜಿಟಲ್ ಆರ್ಥಿಕತೆಯಾಗಿ ಬೆಳೆಯುತ್ತಿದೆ ಎಂದು ಶ್ಲಾಘಿಸಿದ್ದಾರೆ.ಪ್ರಜಾಪ್ರಭುತ್ವವೇ ಭಾರತದ ದೊಡ್ಡ ಶಕ್ತಿ. ಪ್ರಜಾಪ್ರಭುತ್ವವು ಆಡಳಿತವನ್ನು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿಸುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ದೇಶದ ಆರ್ಥಿಕತೆ ತ್ವರಿತವಾಗಿ ಅಭಿವೃದ್ದಿಯಾಗುತ್ತಿರುವುದನ್ನು ಕಳೆದ ಎರಡು ವರ್ಷಗಳಲ್ಲಿ ನಾವು ನೋಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಗಾಂಧಿನಗರ(ಜ.10): ಪ್ರಧಾನಿ ನರೇಂದ್ರ ಮೋದಿ 8 ನೇ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಇಂದು ಉದ್ಘಾಟಿಸಿ, ಭಾರತ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಡಿಜಿಟಲ್ ಆರ್ಥಿಕತೆಯಾಗಿ ಬೆಳೆಯುತ್ತಿದೆ ಎಂದು ಶ್ಲಾಘಿಸಿದ್ದಾರೆ.
ಪ್ರಜಾಪ್ರಭುತ್ವವೇ ಭಾರತದ ದೊಡ್ಡ ಶಕ್ತಿ. ಪ್ರಜಾಪ್ರಭುತ್ವವು ಆಡಳಿತವನ್ನು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿಸುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ದೇಶದ ಆರ್ಥಿಕತೆ ತ್ವರಿತವಾಗಿ ಅಭಿವೃದ್ದಿಯಾಗುತ್ತಿರುವುದನ್ನು ಕಳೆದ ಎರಡು ವರ್ಷಗಳಲ್ಲಿ ನಾವು ನೋಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆ ಜ. 10 ರಿಂದ 13 ರವರೆಗೆ ನಡೆಯಲಿದ್ದು ಸುಸ್ಥಿರ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ಧಿ ಎನ್ನುವ ವಿಚಾರದ ಬಗ್ಗೆ ಫೋಕಸ್ ಮಾಡಲಾಗುವುದು ಎಂದಿದ್ದಾರೆ.
ಭಾಷಣದ ಹೈಲೈಟ್ಸ್:
* ಪ್ರಜಾಪ್ರಭುತ್ವ ಕಳೆದ 2 ವರ್ಷಗಳಲ್ಲಿ ತ್ವರಿತ ಅಭಿವೃದ್ಧಿ ನೀಡಿರುವುದನ್ನು ನಾವು ನೋಡಿದ್ದೇವೆ. ರಾಜ್ಯ ರಾಜ್ಯಗಳ ನಡುವೆ ಸಾಂಸ್ಕೃತಿಕವಾಗಿ ಆರೋಗ್ಯಕರ ಸ್ಪರ್ಧೆಯಿದೆ.
* ನಮ್ಮ ದೃಷ್ಟಿಕೋನ ಮತ್ತು ಧ್ಯೇಯ ನಮ್ಮ ನೀತಿ, ಆರ್ಥಿಕತೆಗೆ ಪೂರಕವಾಗಿದೆ. ಇದರಲ್ಲಿ ಡಿಜಿಟಲ್ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಆಗಾಗ ಹೇಳುತ್ತೇನೆ ಈ-ಆಡಳಿತ ಸುಲಭ ಹಾಗೂ ಪರಿಣಾಮಕಾರಿ.
* ನನ್ನನ್ನು ನಂಬಿ, ನಾವು ಜಗತ್ತಿನ ದೊಡ್ಡ ಡಿಜಿಟಲ್ ಆರ್ಥಿಕತೆಯತ್ತ ಮುನ್ನುಗ್ಗುತ್ತಿದ್ದೇವೆ.
* ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ ನಾವು ಅದ್ಭುತವಾಗಿ ಅಭಿವೃದ್ಧಿಯನ್ನು ಸಾಧಿಸಿದ್ದೇವೆ.
* ನನ್ನ ಸರ್ಕಾರವು ಭಾರತೀಯ ಆರ್ಥಿಕತೆಯನ್ನು ಇನ್ನಷ್ಟು ಸುಧಾರಿಸಲು ಬದ್ಧವಾಗಿದೆ.
* ಮೇಕ್ ಇನ್ ಇಂಡಿಯಾ ಅತೀ ದೊಡ್ಡ ಬ್ರಾಂಡ್ ಆಗಿ ಮಾರ್ಪಟ್ಟಿದೆ.
* ನಾವು ಜಗತ್ತಿನ 6 ನೇ ಅತೀ ದೊಡ್ಡ ಉತ್ಪಾದಕ ದೇಶವಾಗಿದ್ದೇವೆ.
* ನಾವು ಟೂರಿಸಂನ್ನು ಇನ್ನಷ್ಟು ಉನ್ನತ ಮಟ್ಟದಲ್ಲಿ ಪ್ರಚಾರ ನೀಡಬೇಕು. ಮತ್ತು ಇದಕ್ಕೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ.
