ಎಸ್‌ಪಿ ಮುಖಂಡ ಮಾವಿಯಾ ಅಲಿ ವಿವಾದಾತ್ಮಕ ಹೇಳಿಕೆ ನೀಡುವುತ್ತಿರುವುದು ಇದೇ ಮೊದಲೇನಲ್ಲ. ೨೦೧೫ರಲ್ಲಿ ವಿಎಚ್‌ಪಿ ನಾಯಕಿಯಾದ ಸಾಧ್ವಿ ಪ್ರಾಚಿ ಅವರನ್ನು ಹತ್ಯೆಗೈದರೂ, ಯಾವುದೇ ಸಮಾಜಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದಿದ್ದರು.
ಲಖನೌ(ಆ.15): ಉತ್ತರಪ್ರದೇಶದ ಮದರಾಸಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಬೇಕು. ಅಲ್ಲದೆ, ಅದರ ವಿಡಿಯೊವನ್ನು ದಾಖಲಿಸಿಕೊಂಡಿರಬೇಕು ಎಂಬ ರಾಜ್ಯ ಸರ್ಕಾರ ವಿವಾದಾತ್ಮಕ ಸುತ್ತೋಲೆ ಕುರಿತು ಪರ ವಿರೋಧ ಚರ್ಚೆಯ ಬೆಂಕಿಗೆ ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಸೋಮವಾರ ತುಪ್ಪ ಸುರಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡ ಎಸ್ಪಿ ಮುಖಂಡ ಮಾವಿಯಾ ಅಲಿ, ‘ಆಗಸ್ಟ್ 15ರಂದು ಮದರಾಸಗಳಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆ ಮಾಡಲು ಯೋಗಿ ಆದಿತ್ಯನಾಥ್ ಸರ್ಕಾರ ಹೊರಡಿಸಿದ ಸುತ್ತೋಲೆ ಇಸ್ಲಾಂ ವಿರೋಧಿ,’ ಎಂದು ಹೇಳಿದ್ದಾರೆ. ‘ಉತ್ತರಪ್ರದೇಶ ಸರ್ಕಾರ ನೀಡಿರುವ ನಿರ್ದೇಶನಗಳನ್ನು ನಾವು ಪಾಲನೆ ಮಾಡುವುದಿಲ್ಲ. ನಾವು ಮೊದಲು ಮುಸ್ಲಿಮರು ಬಳಿಕ ಭಾರತೀಯರು. ಇಸ್ಲಾಂ ಧರ್ಮದಲ್ಲಿ ಬಿರುಕಿಗೆ ಕಾರಣವಾಗುವಂಥ ಘಟನೆಗಳು ನಡೆದರೆ, ನಾವು ಸಂವಿಧಾನದ ಪರ ನಿಲ್ಲುವುದಿಲ್ಲ. ಇಸ್ಲಾಂ ಪರವೇ ನಿಲ್ಲುತ್ತೇವೆ,’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆ ಇದೇ ಮೊದಲಲ್ಲ:
ಎಸ್ಪಿ ಮುಖಂಡ ಮಾವಿಯಾ ಅಲಿ ವಿವಾದಾತ್ಮಕ ಹೇಳಿಕೆ ನೀಡುವುತ್ತಿರುವುದು ಇದೇ ಮೊದಲೇನಲ್ಲ. ೨೦೧೫ರಲ್ಲಿ ವಿಎಚ್ಪಿ ನಾಯಕಿಯಾದ ಸಾಧ್ವಿ ಪ್ರಾಚಿ ಅವರನ್ನು ಹತ್ಯೆಗೈದರೂ, ಯಾವುದೇ ಸಮಾಜಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದಿದ್ದರು.
--
