ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವರ ಆರೋಗ್ಯ ಸ್ಥಿತಿ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ತಮಿಳುನಾಡು ಅರಣ್ಯ ಸಚಿವ ಸಿ ಶ್ರೀನಿವಾಸನ್ ಜನರ ಕ್ಷಮೆ ಕೋರಿದ್ದಾರೆ.

<!--[if gte mso 9]> Normal 0 <w:TrackMoves/> <w:TrackFormatting/> <w:PunctuationKerning/> <w:ValidateAgainstSchemas/> false false false <w:DoNotPromoteQF/> EN-IN X-NONE KN <w:BreakWrappedTables/> <w:SnapToGridInCell/> <w:WrapTextWithPunct/> <w:UseAsianBreakRules/> <w:DontGrowAutofit/> <w:SplitPgBreakAndParaMark/> <w:DontVertAlignCellWithSp/> <w:DontBreakConstrainedForcedTables/> <w:DontVertAlignInTxbx/> <w:Word11KerningPairs/> <w:CachedColBalance/> MicrosoftInternetExplorer4 <m:dispDef/> <![endif]-->

ನವದೆಹಲಿ (ಸೆ.23): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವರ ಆರೋಗ್ಯ ಸ್ಥಿತಿ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ತಮಿಳುನಾಡು ಅರಣ್ಯ ಸಚಿವ ಸಿ ಶ್ರೀನಿವಾಸನ್ ಜನರ ಕ್ಷಮೆ ಕೋರಿದ್ದಾರೆ.

ಜಯಲಿಲತಾ ಆರೋಗ್ಯ ಸ್ಥಿತಿ ಹದಗೆಟ್ಟಿದ್ದಾಗ ಅವರು ಎಐಎಡಿಎಂಕೆ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಇಡ್ಲಿ ತಿನ್ನುತ್ತಿದ್ದಾರೆ ಅಂತೆಲ್ಲಾ ಸುಳ್ಳು ಹೇಳಿದ್ದೇವೆ. ಎಐಎಡಿಎಂಕೆ ನಾಯಕರು ಸುಳ್ಳು ಹೇಳಿದ್ದಾರೆ. ಸತ್ಯ ಏನಂದರೆ ಯಾರೊಬ್ಬರೂ ಅವರನ್ನು ನೋಡಿಲ್ಲ. ಸುಳ್ಳು ಹೇಳಿದ್ದಕ್ಕಾಗಿ ಜನರ ಕ್ಷಮೆ ಕೋರುತ್ತಿದ್ದೇನೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.

ಯಾವೊಬ್ಬ ಎಐಎಡಿಎಂಕೆ ನಾಯಕರು ಜಯಲಲಿತಾರನ್ನು ಭೇಟಿ ಮಾಡಿಲ್ಲ. ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಪ್ರತಾಪ್ ರೆಡ್ಡಿ ರೂಮಿನಲ್ಲಿ ಕುಳಿತಿರುತ್ತಿದ್ದರು. ಪಕ್ಷದ ಸೀಕ್ರೆಟ್ ಸೋರಿಕೆಯಾಗಬಾರದೆಂದು ನಾವು ಸುಳ್ಳು ಹೇಳಿದ್ದೇವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.

 

<!--[if gte mso 9]> <![endif]--><!--[if gte mso 10]><![endif]--><p>&nbsp;</p>