ನಾರ್ತ್ 24 ಪರ್ಗಾನಸ್ ಜಿಲ್ಲೆಯ ಬದುರಿಯಾ ಹಾಗೂ ಬಸೀರ್ಹತ್’ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ನ್ಯಾಯಾಂಗ ತನಿಖೆಯನ್ನು ಆದೇಶಿಸಿದೆ.
ಕೋಲ್ಕತ್ತಾ: ನಾರ್ತ್ 24 ಪರ್ಗಾನಸ್ ಜಿಲ್ಲೆಯ ಬದುರಿಯಾ ಹಾಗೂ ಬಸೀರ್ಹತ್’ನಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳ ಸರ್ಕಾರವು ನ್ಯಾಯಾಂಗ ತನಿಖೆಯನ್ನು ಆದೇಶಿಸಿದೆ.
ಕಲ್ಕತ್ತಾ ಹೈಕೋರ್ಟ್’ನ ನಿವೃತ್ತ ನ್ಯಾಯಾಧೀಶ ಸೌಮಿತ್ರಾ ಪೌಲ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಗಲಭೆಗೆ ಪ್ರತಿಪಕ್ಷಗಳನ್ನು ದೂಷಿಸಿದ ಮಮತಾ ಬ್ಯಾನರ್ಜಿ, ಯಾವುದೇ ರೀತಿಯ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದೆಂದು ಮನವಿ ಮಾಡಿದ್ದಾರೆ.
ಇನ್ನೊಂದು ಕಡೆ, ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಮನವಿ ಮಾಡಿದೆ.
ಗಲಭೆಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ 4 ಬಿಎಸ್ಎಫ್ ತುಕಡಿಗಳನ್ನು ರವಾನಿಸಿದೆ.
