ಅದು ಹೆಸರಿಗೆ ಮಾತ್ರ ದೊಡ್ಡ ಜಿಲ್ಲಾ ಆಸ್ಪತ್ರೆ. ಖಾಯಿಲೆ ಬೇಗ ಗುಣಮುಖ ವಾಗಲಿ ಅಂತ ರೋಗಿಗಳು ಆಸ್ಪತ್ರೆಗೆ ಬಂದ್ರೆ ಅಲ್ಲಿ ಅನುಭವಿಸುವ ತೊಂದ್ರೆಗಳು ಅಷ್ಡಿಷ್ಟಲ್ಲ. ಈ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಗೋಳ ಹೇಳ ತೀರದು. ಹನಿ ನೀರಿಗಾಗಿ ಹೆರಿಗೆ ವಾರ್ಡ್'ನಲ್ಲಿ ತಾಯಿ ಹಾಗೂ ಹಸುಗುಗಳು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಆ ಅಸ್ಪತ್ರೆ ಯಾವುದು ಅಂತಿರಾ? ಇಲ್ಲಿದೆ ವಿವರ.
ಬೆಳಗಾವಿ(ಮಾ.27): ಅದು ಹೆಸರಿಗೆ ಮಾತ್ರ ದೊಡ್ಡ ಜಿಲ್ಲಾ ಆಸ್ಪತ್ರೆ. ಖಾಯಿಲೆ ಬೇಗ ಗುಣಮುಖ ವಾಗಲಿ ಅಂತ ರೋಗಿಗಳು ಆಸ್ಪತ್ರೆಗೆ ಬಂದ್ರೆ ಅಲ್ಲಿ ಅನುಭವಿಸುವ ತೊಂದ್ರೆಗಳು ಅಷ್ಡಿಷ್ಟಲ್ಲ. ಈ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಗೋಳ ಹೇಳ ತೀರದು. ಹನಿ ನೀರಿಗಾಗಿ ಹೆರಿಗೆ ವಾರ್ಡ್'ನಲ್ಲಿ ತಾಯಿ ಹಾಗೂ ಹಸುಗುಗಳು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಆ ಅಸ್ಪತ್ರೆ ಯಾವುದು ಅಂತಿರಾ? ಇಲ್ಲಿದೆ ವಿವರ.
ಬೇಸಿಗೆ ಶುರುವಾಗುತ್ತಿದ್ದಂತೆ ಜನ ಜಾನುವಾರು ತತ್ತರಿಸಿ ಹೊಗಿದ್ದಾರೆ. ಹನಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು ಹೇರಿಗೆ ವಾರ್ಡಿಗೂ ತಟ್ಟಿದೆ ಬರಗಾಲ ಬೇಗೆ. ಹೌದು ಇದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎಂದು ದಾಖಲಾದ ಬಾನಂತಿಯರ ಹಾಗೂ ರೋಗಿಗಳ ಗೋಳು. ಇಲ್ಲಿ ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಇಲ್ಲದೆ ಕಂಗಾಲಾಗಿದ್ದಾರೆ. ಇನ್ನು ಮುಂಜಾನೆ ಒಂದು ಹೊತ್ತು ನೀರು ಮಾತ್ರ ಇಲ್ಲಿ ಲಭ್ಯವಾಗುತ್ತಿದ್ದು ಮಧ್ಯಾಹ್ನ , ಸಂಜೆ ನೀರು ಬೇಕೆಂದರೆ ದೇವರೆ ಗತಿ. ಇನ್ನು ಶೌಚಾಲಯದಲ್ಲಿ ನೀರಿಲ್ಲದೆ ಗಬ್ಬೆದ್ದು ನಾರುತ್ತಿದ್ದು ದುರ್ವಾಸನೆಯಿಂದ ರೋಗಿಗಳ ಮೂಗು ಮುಚ್ಚಿಕೊಂಡು ಪಡಬಾರದ ಕಷ್ಡ ಪಡುತ್ತಿದ್ದಾರೆ.
ಆಸ್ಪತ್ರೆಯಲ್ಲಿರುವ ರೋಗಿಗಳ ಕಷ್ಟ ಒಂದು ಕಡೆಯಾದರೆ. ರೋಗಿಗಳನ್ನ ನೋಡಿಕೊಳ್ಳಲು ಬಂದ ಪಾಲಕರ ಕಷ್ಟ ಇನ್ನೊಂದು ಕಡೆ. ಇವರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿವುದರಿಂದ ತೊಂದ್ರೆ ಅನುಭವಿಸುತ್ತಿದ್ದರೆ. ಇನ್ನು ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಇಲ್ಲೆದೆ ಮರದ ಕೆಳಗೆ ಮತ್ತು ಎಲ್ಲೆಂದರಲ್ಲಿ ಮಲಗಿಕೊಳ್ಳುತ್ತಿದ್ದಾರೆ. ಆಸನದ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಎಂದು ರೋಗಿಗಳನ್ನ ನೋಡಿಕೊಳ್ಳಲು ಬಂದ ಪಾಲಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಅನಾನುಕೂಲತೆಯ ಆಗರವಾಗುತ್ತಿದೆ. ಇನ್ನಾದರೂ ಜಿಲ್ಲಾ ಆಸ್ಪತ್ರೆಯ ನಿರ್ದೇಶಕ ರು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
