ಮೈತ್ರಿ ಸರಕಾರದಲ್ಲಿ ಪ್ರಮುಖ ಸಚಿವರಿಬ್ಬರ ಕಿತ್ತಾಟ ಮುಂದುವರಿದಿದ್ದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ. 

ಹಾಸನ ಜೂನ್ 15: ಮೈತ್ರಿ ಸರಕಾರದಲ್ಲಿ ಪ್ರಮುಖ ಸಚಿವರಿಬ್ಬರ ಕಿತ್ತಾಟ ಮುಂದುವರಿದಿದ್ದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ಜಲಸಂಪನ್ಮೂಲ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರೆ ನನ್ನನ್ನು ಕರೆಸಿ ಮಾತನಾಡಿ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಗೆ ರೇವಣ್ಣ ಮನವಿ ಸಹ ಮಾಡಿಕೊಂಡಿದ್ದಾರೆ. ಮನವಿ ಮಾಡಿಕೊಳ್ಳುವುದರೊಂದಿಗೆ ವ್ಯಂಗವಾಗಿ ಮಾತನಾಡಿರುವ ರೇವಣ್ಣ ಹಸ್ತಕ್ಷೇಪ ಮಾಡಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದೇನೆ ಎಂದಾದರೂ ಹೇಳಿ ಎಂದಿದ್ದಾರೆ.

ವರ್ಗಾವಣೆ ಮಾಡಲು ನಾನು‌ ಸಿಎಂ ಗೆ ಯಾವ ಅರ್ಜಿ ಕೊಟ್ಟಿದ್ದೇನೆ ಹೇಳಲಿ. ನನಗೂ ಸ್ವಾಭಿಮಾನ ಇದೆ, ನನ್ನನ್ನು ಬ್ಲಾಕ್ ಮೇಲ್ ಮಾಡಿದ್ರೆ ಹೆದರಿ ಓಡಿ ಹೋಗಲ್ಲ ಎಂದು ಡಿಕೆಶಿಗೆ ಪರೋಕ್ಷವಾಗಿ ಹೆಸರು ಹೇಳದೇ ತಿರುಗೇಟು ನೀಡಿದ್ದಾರೆ.

ಡಿಕೆಶಿ ವಿಚಾರದಲ್ಲಿ ನಾನು ಮಾತನಾಡಲ್ಲ ಎಂದ ರೇವಣ್ಣ

ಸರಕಾರ ಸರಿಯಾಗಿ ನಡೆಯಬಾರದು ಎಂದು ಮಾಧ್ಯಮಗಳು ಬೇಕಂತಲೇ ಇಂಥ ವರದಿ ಪ್ರಸಾರ ಮಾಡುತ್ತಿವೆ ಎಂದು ರೇವಣ್ಣ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರಕಾರದಲ್ಲಿ ಸಚಿವರ ನಡುವಿನ ವಾಗ್ಯುದ್ಧಕ್ಕೆ ಫುಲ್ ಸ್ಟಾಪ್ ಬೀಳುವ ಲಕ್ಷಣ ಗೋಚರವಾಗುತ್ತಿಲ್ಲ.