ಸ್ವಾತಂತ್ರ್ಯ ಬಂದೂ ಅರವತ್ತು ವರ್ಷ ಕಳೆದರೂ  ಈ ಭಾಗದ ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಲೋ ಮೀಟರ್ ಹಳ್ಳದಾಟಿ ನೀರು ತರುವ ಅನಿವಾರ್ಯ ಎದುರಾಗಿದೆ. 

ಕಾರವಾರ (ಜ.04): ಸ್ವಾತಂತ್ರ್ಯ ಬಂದೂ ಅರವತ್ತು ವರ್ಷ ಕಳೆದರೂ ಈ ಭಾಗದ ಜನರು ಕುಡಿಯುವ ನೀರಿಗಾಗಿ ಹತ್ತಾರು ಕಿಲೋ ಮೀಟರ್ ಹಳ್ಳದಾಟಿ ನೀರು ತರುವ ಅನಿವಾರ್ಯ ಎದುರಾಗಿದೆ. 

ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೆಜೂಗ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಭಾರೀ ಕಷ್ಟ ಪಡುತ್ತಿದ್ದಾರೆ. ಈ ಮೊದಲು ಈ ಗ್ರಾಮಕ್ಕೆ ಕಟ್ಟಿಗೆಯ ಸೇತುವೆಯಿತ್ತು. ಆದರೆ ಈಗ ಆ ಸೇತುವೆ ಮುರಿದು ಬಿದ್ದು ಮೂರು ವರ್ಷಗಳಾಗಿವೆ. ಸಂಬಂಧ ಪಟ್ಟವರಿಗೆ ತಿಳಿಸಿದ್ರೂ ಸಹ ಹಳ್ಳಕ್ಕೆ ಮತ್ತೆ ಸೇತುವೆ ಭಾಗ್ಯ ಸಿಕ್ಕಿಲ್ಲ. ಅಂಬೆಜೂಗ ಜನರು ತೂಗು ಸೇತುವೆ ನಿರ್ಮಿಸಿ ಕೊಡುವಂತೆ ಅನೇಕ ಬಾರಿ ಸರಕಾರದ ಮುಂದೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಗಲಿ ಗಮನ ನೀಡಿಲ್ಲ. ಈ ಜನರ ಕಷ್ಟಕ್ಕೆ ಇನ್ನಾದರೂ ಸರಕಾರ ಸ್ಪಂಧಿಸುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.