ವಿಜಯ ಕುಲಕರ್ಣಿ ಸೇರಿ ಮೂವರು ಮೇಲೆ ಕೊಲೆ ಯತ್ನ , ಸಂಚು ಹಾಗೂ ಶೂಟೌಟ್ ಪ್ರಕರಣ ದಾಖಲಿಸಿವಂತೆ ಹುಬ್ಬಳ್ಳಿ ಎರಡನೇ ಜೆ.ಎಂ.ಎಫ್.ಸಿ ಕೋರ್ಟ್ ಆದೇಶಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.  

ಹುಬ್ಬಳ್ಳಿ(ಜು.21): ಕಿಮ್ಸ್ ಆಸ್ಪತ್ರೆಯ ವೈದ್ಯ ಶಿವಾನಂದ ದೊಡ್ಡಮನಿ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ಕುಲಕರ್ಣಿ ಸೇರಿದಂತೆ ಮೂರುವ ಆರೋಪಿ ಗಳ ವಿರುದ್ಧ ಹುಬ್ಬಳ್ಳಿ ಕೋರ್ಟ್ ಜಾಮೀನು ವಾರೆಂಟ್ ಜಾರಿ ಮಾಡಿದೆ.

ಇದರೊಂದಿಗೆ ಉತ್ತರ ಕರ್ನಾಟಕವನ್ನೇ ಬೆಚ್ಚಿಬಿಳಿಸಿದ್ದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ದೊಡ್ಡಮನಿ ಶೂಟೌಟ್ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವಿಜಯ ಕುಲಕರ್ಣಿ ಸೇರಿ ಮೂವರು ಮೇಲೆ ಕೊಲೆ ಯತ್ನ , ಸಂಚು ಹಾಗೂ ಶೂಟೌಟ್ ಪ್ರಕರಣ ದಾಖಲಿಸಿವಂತೆ ಹುಬ್ಬಳ್ಳಿ ಎರಡನೇ ಜೆ.ಎಂ.ಎಫ್.ಸಿ ಕೋರ್ಟ್ ಆದೇಶಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಕಿಮ್ಸ್ ನ ಹಿಂದಿನ ನಿರ್ದೇಶಕ ಡಾ.ಎಂಜಿ ಹಿರೇಮಠ, ವಿಶ್ವಪ್ರಕಾಶ್ ಉಳ್ಳಾಗಡ್ಡಿ ಮಠ ಹಾಗೂ ಸಚಿವರ ಸಹೋದರ ವಿಜಯ್ ಕುಲಕರ್ಣಿ ಮೇಲೆ ಐಪಿಸಿ ಸೆಕ್ಷನ್ 307, 120(ಬಿ)ಹಾಗೂ 114 ಅಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. ಈ ಮೂರು ಜನ ಆರೋಪಿತರ ಪೈಕಿ ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಮೂರು ವರ್ಷದ ಹಿಂದೆಯೇ ಮೃತಪಟ್ಟಿದ್ದು, ಗಣ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಹಾಗೂ ಡಾ.ಎಂ.ಜಿ. ಹಿರೇಮಠ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.