ನಿರ್ಮಾಪಕ ಶಕೀಲ್‌ ನೂರಾನಿ ಸಲ್ಲಿಸಿದ್ದ ಬೆದರಿಕೆ ಪ್ರಕರಣದ ವಿಚಾರಣೆಗೆ ಹಾಜರಾಗದ್ದಕ್ಕೆ ದತ್‌ ಅವರಿಗೆ ಕೋರ್ಟ್‌ ಈ ವಾರಂಟ್‌ ಜಾರಿ ಮಾಡಿದೆ.

ಮುಂಬೈ(ಏ.16): ನಟ ಸಂಜಯ್‌ ದತ್‌ ವಿರುದ್ಧ ಸ್ಥಳೀಯ ಕೋರ್ಟ್‌ ಬಂಧನ ವಾರಂಟ್‌ ಜಾರಿ ಮಾಡಿದೆ.

ನಿರ್ಮಾಪಕ ಶಕೀಲ್‌ ನೂರಾನಿ ಸಲ್ಲಿಸಿದ್ದ ಬೆದರಿಕೆ ಪ್ರಕರಣದ ವಿಚಾರಣೆಗೆ ಹಾಜರಾಗದ್ದಕ್ಕೆ ದತ್‌ ಅವರಿಗೆ ಕೋರ್ಟ್‌ ಈ ವಾರಂಟ್‌ ಜಾರಿ ಮಾಡಿದೆ.

2002ರಲ್ಲಿ ತಮ್ಮ ನಿರ್ಮಾಣದ ‘ಜಾನ್‌ ಕೀ ಬಾಜಿ' ಚಿತ್ರದ ಅಭಿನಯಕ್ಕಾಗಿ ಸಂಜಯ್‌ ದತ್‌ ಹಣ ಪಡೆ​ದಿದ್ದು, ಆ ಹಣ ವಾಪಸ್‌ ನೀಡದೇ, ಚಿತ್ರೀಕರಣಕ್ಕೆ ಅರ್ಧದಲ್ಲೇ ಕೈಕೊಟ್ಟಿದ್ದಾರೆ ಎಂದು ನಿರ್ಮಾಪಕ ನೂರಾನಿ ದೂರಿದ್ದರು.

ಈ ಬಗ್ಗೆ ಭಾರತೀಯ ಮೋಷನ್‌ ಪಿಕ್ಚರ್ಸ್‌ ಪ್ರೊಡ್ಯೂಸರ್ಸ್‌ ಅಸೋಸಿ​ಯೇಷನ್‌ ಸಹ ನೂರಾನಿ ಅವರಿಗೆ ಹಣ ಮರಳಿಸುವಂತೆ ದತ್‌ಗೆ ಸೂಚಿಸಿತ್ತು.