Asianet Suvarna News Asianet Suvarna News

ಬೆಂಗಳೂರಿಗರೇ ಕಾರು ಖರೀದಿಗೆ ಇಲ್ಲ ಅವಕಾಶ : ಯಾಕೆ..?

ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ತೀವ್ರಗತಿಯ ಹೆಚ್ಚಳ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಭವಿಷ್ಯದಲ್ಲಿ ಹೊಸ ಕಾರು ಖರೀದಿ ಹಾಗೂ ನೋಂದಣಿಗೆ ಪಾರ್ಕಿಂಗ್ ಸ್ಥಳ ಕಡ್ಡಾಯ ಮಾಡಲು ಚಿಂತನೆ ಮಾಡುತ್ತಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
 

Want to register your new car? Have parking space first

ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ತೀವ್ರಗತಿಯ ಹೆಚ್ಚಳ ಹಾಗೂ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಭವಿಷ್ಯದಲ್ಲಿ ಹೊಸ ಕಾರು ಖರೀದಿ ಹಾಗೂ ನೋಂದಣಿಗೆ ಪಾರ್ಕಿಂಗ್ ಸ್ಥಳ ಕಡ್ಡಾಯ ಮಾಡಲು ಚಿಂತನೆ ಮಾಡುತ್ತಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

ಅಲ್ಲದೆ, ಕ್ರಮೇಣ ಡೀಸೆಲ್ ವಾಹನಗಳ ಮಾರಾಟ ಹಾಗೂ ನೋಂದಣಿ ಸಹ ಕಡಿಮೆ ಮಾಡಲಾಗುವುದು ಎಂದೂ ಅವರು ಉದ್ಯಾನನಗರಿಯ ವಾಹನ ಪ್ರಿಯರಿಗೆ ಎಚ್ಚರಿಕೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಪತ್ರಿ ಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಖಾಸಗಿ ವಾಹನ ಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿವೆ. ಪ್ರಸ್ತುತ 60 ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ಕೆಲವರು ಮನೆಗೆ 2- 3 ಕಾರುಗಳನ್ನು ಖರೀದಿಸುತ್ತಿದ್ದಾರೆ. ಇನ್ನೂ ಕೆಲವರು ಪಾರ್ಕಿಂಗ್‌ಗೆ ಸ್ಥಳವಿಲ್ಲದಿದ್ದರೂ ಕಾರು ಖರೀದಿ ಮಾಡಿ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದಾರೆ.

ಇದರಿಂದಲೂ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ಕಾರು ನೋಂದಣಿಗೆ ಪಾರ್ಕಿಂಗ್ ಸ್ಥಳ ತೋರಿಸುವುದು ಕಡ್ಡಾಯ ಮಾಡಲು ಚಿಂತನೆ ನಡೆಸಲಾಗು ತ್ತಿದೆ ಎಂದು ಹೇಳಿದರು. ಇದಕ್ಕೂ ಮೊದಲು ನಗರ ನಾಗರಿಕರಿಗೆ ಸಾರ್ವಜನಿಕ ಸಾರಿಗೆ ಬಳಕೆಗೆ ಪ್ರೋತ್ಸಾಹ ನೀಡಲಾಗುವುದು. ಈ ಬಗ್ಗೆ ಒಂದು ವರ್ಷ ಕಾಲ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕ ಸಾರಿಗೆ ಬಳಕೆಯಿಂದ ಸಂಚಾರ ದಟ್ಟಣೆ, ವಾಯುಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಉಳಿದಂತೆ, ಅನಿವಾರ್ಯವಾಗಿ ಸ್ವಂತ ವಾಹನ ಬಳಸುವ ವರು ಕಾರ್, ಬೈಕ್ ಪೂಲಿಂಗ್ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸಿದರೂ ಪ್ರಯೋಜನವಾಗದಿದ್ದರೆ ಅಂತಿಮವಾಗಿ ಹೊಸ ಕಾರು ಖರೀದಿಗೆ ಪಾರ್ಕಿಂಗ್ ಸ್ಥಳ ಕಡ್ಡಾಯ ಮಾಡಲು ಚಿಂತಿಸಲಾಗುವುದು ಎಂದು ಮಾಹಿತಿ ನೀಡಿದರು. 

ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಜನರು ಸ್ವಂತ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸಲು ನಿಗದಿತ ವೇಳೆಯಲ್ಲಿ ಕೆಳಸೇತುವೆ, ಮೇಲ್ಸೇತುವೆ, ಸಿಗ್ನಲ್ ಫ್ರೀ ಕಾರಿಡಾರ್‌ನಂ ತಹ ಯೋಜನೆಗಳನ್ನು  ರ್ಣಗೊಳಿಸಬೇಕು ಎಂದರು.

Follow Us:
Download App:
  • android
  • ios