ನವದೆಹಲಿ (ಸೆ.09): ಭಾರತಕ್ಕೆ ವಾಪಸ್ಸಾಗಲು ಇಚ್ಚೆಯಿದೆ ಎಂದು ಉದ್ಯಮಿ ವಿಜಯ್ ಮಲ್ಯ ಇಂದು ದೆಹಲಿ ನ್ಯಾಯಾಲಯಕ್ಕೆ ಹೇಳಿದ್ದಾರೆ. ಆದರೆ ಅವರ ಪಾಸ್ ಪೋರ್ಟನ್ನು ಸರ್ಕಾರ ರದ್ದುಗೊಳಿಸಿದ್ದರಿಂದ ವಾಪಸ್ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಯ ದೆಹಲಿ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ.
ರೂ. 9,000 ಕೋಟಿ ಸಾಲ ಭಾರವನ್ನು ಹೊತ್ತಿರುವ ಮಲ್ಯ ಇದುವರೆಗೂ ಕೋರ್ಟ್ ವಿಚಾರಣೆಗೆ ಹಾಜರಾಗದೇ ಇಂಗ್ಲೆಂಡ್ ಗೆ ಹಾರಿದ್ದರು. ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರೂ ಹಾಜರಾಗಿರಲಿಲ್ಲ. ಹಾಗಾಗಿ ಮುಂಬೈ ನ್ಯಾಯಾಲಯ ಜಾಮೀನು ರಹಿತ ವಾರೆಂಟನ್ನು ಜಾರಿಗೊಳಿಸಿತ್ತು. ಅವರ ಪಾಸ್ ಪೋರ್ಟನ್ನು ಸರ್ಕಾರ ಹಿಂತೆಗೆದುಕೊಂಡಿತ್ತು.
ಇದೀಗ ಮಲ್ಯ ಭಾರತಕ್ಕೆ ಮರಳಲು ಸಿದ್ಧವಿರುವುದಾಗಿ ಹೇಳಿದ್ದಾರೆ. “ನನ್ನ ಮೇಲಿರುವ ಸಾಲವನ್ನು ತೀರಿಸಲು ಸಿದ್ಧವಿದ್ದೇನೆ. ಆದರೆ ಪಾಸ್ ಪೋರ್ಟ್ ರದ್ದಾಗಿರುವುದರಿಂದ ಮರಳಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.a
