ಕಾಶ್ಮೀರವು ಬಹುಕಾಲದಿಂದ ಬಗೆಹರಿಯದ ವಿವಾದವಾಗಿದೆ, ಅಂತರಾಷ್ಟ್ರೀಯ ಸಮುದಾಯವು ಈ ವಿವಾದವನ್ನು ಪರಿಹರಿಸುವಲ್ಲಿ ಸೂಕ್ತ ಪಾತ್ರವನ್ನು ವಹಿಸಬೇಕೆಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಝಕರಿಯಾ ಹೇಳಿದ್ದಾರೆ.
ಇಸ್ಲಾಮಾಬಾದ್ (ಡಿ.29): ಕಾಶ್ಮೀರ ಸೇರಿದಂತೆ, ಭಾರತದೊಂದಿಗೆ ಇರುವ ಎಲ್ಲಾ ವಿವಾದಗಳನ್ನು ಸೌಹಾರ್ದಾಯುತವಾಗಿ ಬಗೆಹರಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನವಿಂದು ಹೇಳಿದೆ.
ಕಾಶ್ಮೀರವು ಬಹುಕಾಲದಿಂದ ಬಗೆಹರಿಯದ ವಿವಾದವಾಗಿದೆ, ಅಂತರಾಷ್ಟ್ರೀಯ ಸಮುದಾಯವು ಈ ವಿವಾದವನ್ನು ಪರಿಹರಿಸುವಲ್ಲಿ ಸೂಕ್ತ ಪಾತ್ರವನ್ನು ವಹಿಸಬೇಕೆಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ನಫೀಸ್ ಝಕರಿಯಾ ಹೇಳಿದ್ದಾರೆ.
ಭಾರತದೊಂದಿಗಿರುವ ಎಲ್ಲಾ ವಿವಾದಗಳನ್ನು ನಾವು ಸೌಹಾರ್ದಯುತವಾಗಿ ಬಗೆಹರಿಸಲಿಚ್ಚಿಸುತ್ತೇವೆ, ಎಂದಿರುವ ಝಕರಿಯಾ, ಇಶ್ವಸಂಸ್ಥೆಯ ಭದ್ರತಾ ಮಂಡಳಿಯ ಠರಾವನ್ನು ಭಾರತ ಉಲ್ಲಂಘಿಸುತ್ತಿರುವುದೆ ಖಂಡನೀಯವೆಂದು ಹೇಳಿದ್ದಾರೆ.
ಇಂಡಸ್ ಒಪ್ಪಂದದ ಬಗ್ಗೆ ಮಾತನಾಡಿದ ಅವರು, ಯಾವುದೇ ಒಂದು ದೇಶವು ಏಕಪಕ್ಷೀಯವಾಗಿ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲವೆಂದಿದ್ದಾರೆ.