Asianet Suvarna News Asianet Suvarna News

ವಿವಿ ಪ್ಯಾಟ್‌ ಆಯ್ತು, ಈಗ ವಿವಿಪ್ಯಾಟ್‌ ರಸೀದಿ ಪತ್ತೆ..!

ಬಸವನ​ಬಾಗೇ​ವಾಡಿ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ಮತಗಟ್ಟೆಸಂಖ್ಯೆ 12ಕ್ಕೆ ಸೇರಿದ ರಶೀದಿ ಇದಾ​ಗಿ​ದೆ. ಮತ​ಯಂತ್ರ​ದ ಮೂಲ​ಕ ವೋಟ್‌ ಹಾಕಿದ ಬಳಿಕ ನಾವು ನಿರ್ದಿಷ್ಟ ಅಭ್ಯ​ರ್ಥಿಗೇ ವೋಟ್‌ ಹಾಕಿ​ದ್ದೇವೆ ಎನ್ನು​ವು​ದನ್ನು ಖಚಿ​ತ​ಪ​ಡಿ​ಸುವ ವಿವಿ ಪ್ಯಾಟ್‌ನ ರಶೀದಿ ಇದಾ​ಗಿದೆ. ಈ ರಶೀದಿ ಬಹಿ​ರಂಗ​ವಾದ ಹಿನ್ನೆ​ಲೆ​ಯಲ್ಲಿ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

VVPAT Receipt Found In Basavana Bagewadi Consistency

ಬಸವನಬಾಗೇವಾಡಿ[ಜೂ.01]: ವಿಜ​ಯ​ಪುರ ಜಿಲ್ಲೆ​ಯ ಮನ​ಗೂ​ಳಿ​ಯ ಶೆಡ್‌​ವೊಂದ​ರಲ್ಲಿ ಇತ್ತೀಚೆಗಷ್ಟೇ ವಿವಿ ಪ್ಯಾಟ್‌ ಮಷಿ​ನ್‌​ನ ಬಾಕ್ಸ್‌ ಪತ್ತೆಯಾದ ಬೆನ್ನಲ್ಲೇ ಈಗ ವಿವಿ ಪ್ಯಾಟ್‌ ರಶೀದಿ ಪತ್ತೆಯಾಗಿರುವ ಘಟನೆಯೊಂದು ಬೆಳ​ಕಿಗೆ ಬಂದಿ​ದೆ.
ಬಸವನ​ಬಾಗೇ​ವಾಡಿ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ಮತಗಟ್ಟೆಸಂಖ್ಯೆ 12ಕ್ಕೆ ಸೇರಿದ ರಶೀದಿ ಇದಾ​ಗಿ​ದೆ. ಮತ​ಯಂತ್ರ​ದ ಮೂಲ​ಕ ವೋಟ್‌ ಹಾಕಿದ ಬಳಿಕ ನಾವು ನಿರ್ದಿಷ್ಟ ಅಭ್ಯ​ರ್ಥಿಗೇ ವೋಟ್‌ ಹಾಕಿ​ದ್ದೇವೆ ಎನ್ನು​ವು​ದನ್ನು ಖಚಿ​ತ​ಪ​ಡಿ​ಸುವ ವಿವಿ ಪ್ಯಾಟ್‌ನ ರಶೀದಿ ಇದಾ​ಗಿದೆ. ಈ ರಶೀದಿ ಬಹಿ​ರಂಗ​ವಾದ ಹಿನ್ನೆ​ಲೆ​ಯಲ್ಲಿ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗ ಸೂಕ್ತ ತನಿಖೆ ನಡೆ​ಸ​ಬೇ​ಕೆಂದು ಕ್ಷೇತ್ರದ ಪರಾಜಿತ ಜೆಡಿ​ಎಸ್‌ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ ಅವರು ಚುನಾ​ವಣಾ ಆಯೋ​ಗಕ್ಕೆ ಬುಧವಾರ ಬೆಂಗಳೂರಿನಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಮನಗೂಳಿ ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶೆಡ್‌ವೊಂದರಲ್ಲಿ ಮೇ 20ರಂದು ಎಂಟು ವಿವಿ ಪ್ಯಾಟ್‌ ಯಂತ್ರದ ಬಾಕ್ಸ್‌​ಗ​ಳು ಪತ್ತೆಯಾಗಿದ್ದವು. ಇದು ಭಾರೀ ಚರ್ಚೆಗೆ ಕಾರ​ಣ​ವಾ​ಗಿತ್ತು. ಈಗ ಮೇ 27ರಂದು ಇದೇ ಮತಕ್ಷೇತ್ರಕ್ಕೆ ಸೇರಿದ ವಿವಿ ಪ್ಯಾಟ್‌ನ ಮುದ್ರಿತ ರಶೀದಿ ಸಿಕ್ಕಿ​ರು​ವುದು ಸಾರ್ವ​ಜ​ನಿ​ಕರ ಗೊಂದ​ಲ​ವನ್ನು ಮತ್ತಷ್ಟುಹೆಚ್ಚಿ​ಸಿದೆ. ವಿವಿ ಪ್ಯಾಟ್‌ನ ಮುದ್ರಿತ ರಶೀದಿ ಕುರಿತು ಬಸವನಬಾಗೇವಾಡಿ ಮತಕ್ಷೇತ್ರದ ಚುನಾವಣಾಧಿಕಾರಿಗಳು ಗುರುವಾರ ಮನಗೂಳಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿ​ಸಿ​ದ್ದಾ​ರೆ.

Follow Us:
Download App:
  • android
  • ios