ಅಧ್ಯಕ್ಷ ಸ್ಥಾನಕ್ಕೆ ಬಂತು ಕುತ್ತು : ಮತ್ತೆ ಚುನಾವಣೆ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 4:00 PM IST
Vokkaligara Sangha President Bettegowda To Face No Confidence Motion
Highlights

ಅಧ್ಯಕ್ಷ ಸ್ಥಾನದಿಂದ ಈ ವ್ಯಕ್ತಿಯನ್ನು ಕೆಳಕ್ಕಿಳಿಸುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಈ ನಿಟ್ಟಿನಲ್ಲಿ  ಇದೀಗ ಮತ್ತೆ ಚುನಾವಣೆಯೊಂದು ಜರುಗುವ ಸಾಧ್ಯತೆ ಇದೆ. ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟೆಗೌಡ ಸ್ಥಾನಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ. 

ಬೆಂಗಳೂರು : ಒಕ್ಕಲಿಗ ಸಂಘದ ಮಹಾಬಿಕ್ಕಟ್ಟು ಇದೀಗ ತಾರಕಕ್ಕೇರಿದೆ.  ಒಕ್ಕಲಿಗ ಸಂಘದ ಅಧ್ಯಕ್ಷ ಬೆಟ್ಟೆಗೌಡ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಒಕ್ಕಲಿಗ ಸಂಘದ ನಿರ್ದೇಶಕರು ಮುಂದಾಗಿದ್ದಾರೆ. 

ಚಾಮರಾಜಪೇಟೆಯ ಒಕ್ಕಲಿಗ ಸಂಘದಲ್ಲಿ ಸಭೆ ಸೇರಿ ನಿರ್ದೇಶಕರು, ಪದಾಧಿಕಾರಿಗಳು ಈ ಬಗ್ಗೆ ತೀರ್ಮಾನ ಮಾಡಿದ್ದಾರೆ. ಅಧ್ಯಕ್ಷ ಬೆಟ್ಟೆಗೌಡ ಮತ್ತು ಅವರ ತಂಡದ ವಿರುದ್ಧ ಅವಿಶ್ವಾಸ ಮಂಡಿಸಲು ನಿರ್ಧಾರ ಮಾಡಲಾಗಿದೆ. 

ಈ ಹಿಂದೆ ಅವಿಶ್ವಾಸ ನಿರ್ಣಕ್ಕೆ ಸಭೆ ನಿಗದಿ ಮಾಡಿ ಎಂದು ಪತ್ರ ಬರೆದಿದ್ದರೂ ಕೂಡ ಯಾವುದೇ ಸಭೆಯನ್ನು ನಿಗದಿ ಮಾಡಿರಲಿಲ್ಲ. ಇದೀಗ ಅವಿಶ್ವಾಸ ನಿರ್ಣಯ ಮಂಡಿಸಲು ಒಕ್ಕಲಿಗರ ಸಂಘದ ನಿರ್ದೇಶಕರು ಸಹ ಮಾಡಿ ಬಳಿಕ ಸಭೆ ನಡೆಸಿದ್ದಾರೆ.

ಇದರಿಂದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿರುವ ಬೆಟ್ಟೇಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಿ ಮತ್ತೆ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಿದೆ.

loader