ಬಳ್ಳಾರಿ (ಫೆ.14): ವಿಜಯನಗರ ಶ್ರಿ ಕೃಷ್ಣದೇವರಾಯ ವಿವಿ (ವಿಎಸ್ ಕೆ) ವ್ಯಾಪ್ತಿಯ ನಕಲಿ ಅಂಕಪಟ್ಟಿ ನೀಡಿ 600 ವಿದ್ಯಾರ್ಥಿಗಳ ಪ್ರವೇಶ ರದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ಆಡಳಿತ ಮಂಡಳಿ, ವಿದ್ಯಾರ್ಥಿ ಸಂಘಟನೆಯ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿ ಮುಖಂಡರು ಮತ್ತು ಕುಲಪತಿ ನಡುವೆ ವಾಗ್ವಾದ ನಡೆದಿದೆ.

ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡದಿರಲು ವಿದ್ಯಾರ್ಥಿ ಸಂಘಟನೆಯ ಮುಖಂಡರು ಆಗ್ರಹಿಸಿದ್ದು ಮಾನವೀಯತೆಯ ಆಧಾರದ ಮೇಲೆ ಕೇಸ್ ಹಾಕದಿರಲು ಮನವಿ ಮಾಡಿದ್ದಾರೆ.
ನಕಲಿ ಅಂಕಪಟ್ಟಿ ನೀಡಿ ಪದವಿ ಪ್ರವೇಶ ಪಡೆದ 600ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಬದಲು ಡಿಪ್ಲೊಮಾ ಪ್ರಮಾಣ ಪತ್ರ ನೀಡಲು ವಿವಿ ನಿರ್ಧಾರಿಸಿದೆ.
ರಾಜ್ಯದ ಪಿಯು ಬೋರ್ಡ್ ಹೊರತುಪಡಿಸಿ ಬೇರೆ ಬೋರ್ಡ್ ಅಂಕಪಟ್ಟಿ ಸ್ವೀಕರಿಸದಿರಲು ವಿವಿ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.
ವಿವಿಯ ಆಡಳಿತ ಮಂಡಳಿ, ಎಸ್ಎಫ್ಐ, ಎನ್ಎಸ್ಯುಐ, ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.