ಮೈಸೂರು (ಡಿ. 03): ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಜಾಗ ವಿವಾದ ಕಗ್ಗಂಟಾಗಿಯೇ ಉಳಿದಿದೆ. 

ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಒತ್ತಡ ಹೆಚ್ಚಾಗಿದೆ. ಮೈಸೂರು ತಾಲೂಕು ಹಾಲಾಳು ಗ್ರಾಮದಲ್ಲಿರುವ ಸ್ಥಳವೊಂದನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಗುರುತಿಸಿದೆ. ಇಲ್ಲಿಗೆ ಏಕಾಏಕಿ ನುಗ್ಗಿದ ವಿಷ್ಣುಸೇನಾ ಸದಸ್ಯರು ಜಾಗದಲ್ಲಿದ್ದ ಗಿಡಗಂಟೆಗಳನ್ನು ಶುಚಿಗೊಳಿಸಿದ್ದಾರೆ. 

ಹೋಮಕುಂಡ ಸರಿಪಡಿಸಿ ಪೂಜೆಗಾಗಿ ಸಿದ್ಧತೆ ನಡೆಸಿದ್ದಾರೆ.  ವಿಷ್ಣು ಸ್ಮಾರಕ ನಿರ್ಮಾಣ ಆಗುವವರೆಗೆ ಸ್ಥಳದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. 

ಸ್ಮಾರಕ ಮಾಡಲು ಸರ್ಕಾರಕ್ಕೆ ವಿಷ್ಣು ಅಭಿಮಾನಿಗಳು ಗಡುವು ಕೊಟ್ಟಿದ್ದಾರೆ.  ಡಿಸೆಂಬರ್ 30 ವಿಷ್ಣುವರ್ಧನ್ ಪುಣ್ಯ ಸ್ಮರಣೆ ಹೊತ್ತಿಗೆ ಸ್ಮಾರಕ ಜಾಗದಲ್ಲಿ ಗುದ್ದಲಿ ಪೂಜೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. 

ವಿಷ್ಣು ಸೇನಾ ಸಮಿತಿ ಮಂಡ್ಯ ಜಿಲ್ಲಾಧ್ಯಕ್ಷ ಶ್ರೀಕಂಠ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದಾರೆ.