ಹೊಸದಿಲ್ಲಿ (ಡಿ.23):  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇಶದಲ್ಲೇ ಅತಿ ಹೆಚ್ಚು ಬ್ರ್ಯಾಂಡ್ ಮೌಲ್ಯ ಹೊಂದಿರುವ ಸೆಲಿಬ್ರಿಟಿ ಮಾತ್ರವಲ್ಲ, ಈ ವರ್ಷ ಅತಿಹೆಚ್ಚು ಸಂಪಾದನೆ ಮಾಡಿರುವ ಕ್ರೀಡಾಪಟು ಸಹ ಹೌದು.

ಫೋರ್ಬ್ಸ್ ಇಂಡಿಯಾ ಸಂಸ್ಥೆ 2017 ರಲ್ಲಿ ಪ್ರಾಯೋಜಕತ್ವ, ಜಾಹೀರಾತು ಒಪ್ಪಂದಗಳಿಂದ ಅತಿಹೆಚ್ಚು ಸಂಪಾದಿಸಿದ ಅಗ್ರ 100 ಸೆಲಿಬ್ರಿಟಿಗಳ ಪಟ್ಟಿಯನ್ನು ಪ್ರಕಟಿಸಿ ದ್ದು, ಕ್ರೀಡಾ ವಿಭಾಗದಲ್ಲಿ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದಾರೆ.  ಈ ವರ್ಷ ಕೊಹ್ಲಿಯ ಒಟ್ಟು ಗಳಿಕೆ ಬರೋಬ್ಬರಿ 100.72 ಕೋಟಿಯಾಗಿದೆ.

ಒಟ್ಟಾರೆ ವಿರಾಟ್ 3ನೇ ಸ್ಥಾನ ಪಡೆದಿದ್ದು, ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಅಗ್ರ 100ರ ಪಟ್ಟಿಯಲ್ಲಿ 21 ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ.