ಇದೀಗ ಬಾಲಿವುಡ್‌'ನಲ್ಲಿನ ಆಪ್ತರು ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಇತರೆ ಸ್ನೇಹಿತರಿಗಾಗಿ ಮುಂಬೈನ ಸೇಂಟ್ ರೆಗಿಸ್ ಹೋಟೆಲ್‌'ನಲ್ಲಿ ಔತಣಕೂಟ ಆಯೋಜಿಸಲಾಗಿದೆ. ಸುಮಾರು 300 ಅತಿಥಿಗಳಿಗೆ ಆಸನ ಸಾಮರ್ಥ್ಯವಿರುವ ಆರತಕ್ಷತೆ ಹಾಲ್'ನಲ್ಲಿ ಸಂಜೆ 8.30ರಿಂದ ಆರತಕ್ಷತೆ ಆರಂಭವಾಗಲಿದೆ.

ಮುಂಬೈ(ಡಿ.26): ಇತ್ತೀಚೆಗಷ್ಟೇ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ

ಜೋಡಿ, ಇಂದು ಮುಂಬೈನಲ್ಲಿ ಬಾಲಿವುಡ್ ಹಾಗೂ ಕ್ರಿಕೆಟ್ ವಲಯದ ಸ್ನೇಹಿತರಿಗಾಗಿ ಔತಣಕೂಟ ಏರ್ಪಡಿಸಿದ್ದಾರೆ.

ವಿರುಷ್ಕಾ ಜೋಡಿ ಸಂಬಂಧಿಕರು, ಕುಟುಂಬದ ಆಪ್ತರು ಹಾಗೂ ಸ್ನೇಹಿತರಿಗೆ ಡಿ.21ರಂದು ನವದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಇದೀಗ ಬಾಲಿವುಡ್‌'ನಲ್ಲಿನ ಆಪ್ತರು ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಇತರೆ ಸ್ನೇಹಿತರಿಗಾಗಿ ಮುಂಬೈನ ಸೇಂಟ್ ರೆಗಿಸ್ ಹೋಟೆಲ್‌'ನಲ್ಲಿ ಔತಣಕೂಟ ಆಯೋಜಿಸಲಾಗಿದೆ. ಸುಮಾರು 300 ಅತಿಥಿಗಳಿಗೆ ಆಸನ ಸಾಮರ್ಥ್ಯವಿರುವ ಆರತಕ್ಷತೆ ಹಾಲ್'ನಲ್ಲಿ ಸಂಜೆ 8.30ರಿಂದ ಆರತಕ್ಷತೆ ಆರಂಭವಾಗಲಿದೆ.

ನಿರ್ದೇಶಕ ಕುನಾಲ್ ಕೊಹ್ಲಿ ತಾರಾ ದಂಪತಿ ಕಳಿಸಿದ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಟ್ವಿಟ್ಟರ್'ನಲ್ಲಿ ಹಂಚಿಕೊಂಡಿದ್ದಾರೆ.

Scroll to load tweet…