Asianet Suvarna News Asianet Suvarna News

ಆರ್ ಎಸ್ ಎಸ್ ಸಭೆಯಲ್ಲಿ ಪಂಡಿತ್ ನೆಹರು ಪಾಲ್ಗೊಂಡಿದ್ದರೇ ? [ವೈರಲ್ ಚೆಕ್ ]

ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪಾಲ್ಗೊಂಡಿದ್ದರು ಎಂಬಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫ್ಯಾನ್‌ಪೇಜ್ ಆದ ‘ಸಪೋರ್ಟ್ ಅಜಿತ್ ದೋವಲ್’ ಈ ಪೋಟೋವನ್ನು ಪೋಸ್ಟ್ ಮಾಡಿ, ‘ನೆಹರು ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ನಿಂತಿದ್ದಾರೆ. ಈಗ ಹೇಳಿ, ನೆಹರು ಕೂಡ ಕೇಸರಿ ಭಯೋತ್ಪಾದಕರಲ್ಲವೇ?’ ಎಂಬ ಅಡಿಬರಹವನ್ನು ಬರೆಯಲಾಗಿದೆ. 

Viral photograph claims Nehru attended RSS shakha meeting

ಬೆಂಗಳೂರು :  ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಪಾಲ್ಗೊಂಡಿದ್ದರು ಎಂಬಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಫ್ಯಾನ್‌ಪೇಜ್ ಆದ ‘ಸಪೋರ್ಟ್ ಅಜಿತ್ ದೋವಲ್’ ಈ ಪೋಟೋವನ್ನು ಪೋಸ್ಟ್ ಮಾಡಿ, ‘ನೆಹರು ಆರ್‌ಎಸ್‌ಎಸ್ ಶಾಖಾ
ಸಭೆಯಲ್ಲಿ ನಿಂತಿದ್ದಾರೆ. 

ಈಗ ಹೇಳಿ, ನೆಹರು ಕೂಡ ಕೇಸರಿ ಭಯೋತ್ಪಾದಕರಲ್ಲವೇ?’ ಎಂಬ ಅಡಿಬರಹವನ್ನು ಬರೆಯಲಾಗಿದೆ. ಈ ಫೋಟೋದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಶಾರ್ಟ್ಸ್, ಟೋಪಿ ಧರಿಸಿ ಆರ್‌ಎಸ್‌ಎಸ್ ಪ್ರೋಟೋಕಾಲ್ ಅನ್ನೇ ಹೋಲುವ ದಂಡ ಹಿಡಿದು ನಿಂತಿದ್ದಾರೆ. ಈ ಪೋಸ್ಟ್ 6 ,800  ಬಾರಿ ಶೇರ್ ಆಗಿದೆ. ಈ ಪೋಸ್ಟನ್ನು ರಾಷ್ಟ್ರೀಯ ಸ್ವಯಂ ಸೇವಕ ಫ್ಯಾನ್ ಪೇಜ್ ಕೂಡ ಪೋಸ್ಟ್ ಮಾಡಿದೆ. 

ಆದರೆ ನಿಜಕ್ಕೂ ನೆಹರು ಅವರು ಆರ್‌ಎಸ್‌ಎಸ್ ಶಾಖಾ ಸಭೆಯಲ್ಲಿ ಭಾಗವಹಿಸಿದ್ದರೇ ಎಂದು ‘ಆಲ್ಟ್ ನ್ಯೂಸ್’ ತನಿಖೆಗೆ ಮುಂದಾದಾಗ,  ನೆಹರು ಆರ್‌ಎಸ್‌ಎಸ್ ಸಭೆಯಲ್ಲಿ ಪಾಲ್ಗೊಂಡಿಲ್ಲ, ಇದೊಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. ಫೋಟೋದಲ್ಲಿ ಕಾಣುತ್ತಿ ರುವುದು ನೆಹರು ಅವರೇ ಆಗಿದ್ದರೂ, ಅವರು ಆರ್‌ಎಸ್‌ಎಸ್ ಸಭೆಯಲ್ಲಿ ನಿಂತಿದ್ದಲ್ಲ. ಸೇವಾದಳದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದ ಚಿತ್ರವದು. 1939 ರಲ್ಲಿ ಉತ್ತರ ಪ್ರದೇಶದ ನೈನಿ ಎಂಬಲ್ಲಿ ನೆಹರು ಅವರು ಬಿಳಿಯ ಬಣ್ಣದ ಟೋಪಿ ಧರಿಸಿ ಸೇವಾ ದಳದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಆರ್‌ಎಸ್‌ಎಸ್ ತನ್ನ ಸಮವಸ್ತ್ರವನ್ನು 1925 ರಲ್ಲೇ ಪರಿಚಯಿಸಿತ್ತಾದರೂ ಆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕಪ್ಪು ಬಣ್ಣದ ಟೋಪಿ ಪರಿಚಯಿಸಿತ್ತೇ ಹೊರತು ಬಿಳಿ ಬಣ್ಣದ್ದಲ್ಲ.

Latest Videos
Follow Us:
Download App:
  • android
  • ios