ಜೆಟ್‌ ಏರ್‌ವೇಸ್‌ ಪ್ರತಿಯೊಬ್ಬರಿಗೂ ಉಚಿತ ಟಿಕೆಟ್‌ ಕೊಡುತ್ತಿದೆಯಾ?

Viral: Is Jet Airways really giving free couple tickets?
Highlights

 ಮುಂಬೈ ಮೂಲದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿಯೊಂದು ಕುಟುಂಬಕ್ಕೂ 2 ಉಚಿತ ವಿಮಾನ ಟಿಕೆಟ್‌ ನೀಡುತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 
 

ಬೆಂಗಳೂರು : ಮುಂಬೈ ಮೂಲದ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರತಿಯೊಂದು ಕುಟುಂಬಕ್ಕೂ 2 ಉಚಿತ ವಿಮಾನ ಟಿಕೆಟ್‌ ನೀಡುತ್ತಿದೆ ಎಂಬಂತಹ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 

‘ಪ್ರತಿಯೊಬ್ಬರೂ ಜೆಟ್‌ ಏರ್‌ವೇಸ್‌ನ 25ನೇ ವರ್ಷಾಚರಣೆಯನ್ನು ಸಂಭ್ರಮಿಸಿ. ಆದರೆ ಮೊದಲಿಗೆ ಈ ಸಂದೇಶವನ್ನು ನಿಮ್ಮ 20 ಸ್ನೇಹಿತರಿಗೆ ಫಾರ್ವರ್ಡ್‌ ಮಾಡಿ. ಅನಂತರ ಲಿಂಕ್‌ ಮೇಲೆ ಕ್ಲಿಕ್‌ ಮಾಡುತ್ತಾ ಹೋಗಿ. ನಂತರ ನಿಮ್ಮ ವಿಳಾಸವನ್ನು ಭರ್ತಿಮಾಡಿ. ಮುಂದಿನ 24-48 ಗಂಟೆಗಳಲ್ಲಿ ನಿಮಗೆ ನೀಡಲಾದ ಉಚಿತ ಟಿಕೆಟ್‌ ಬಗ್ಗೆ ಮೇಲ್‌ ಕಳಿಸಲಾಗುತ್ತದೆ’ ಎಂದು ಹೇಳಲಾಗಿದೆ. 

ಆದರೆ ನಿಜಕ್ಕೂ ಜೆಟ್‌ ಏರ್‌ವೇಸ್‌ ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಟಿಕೆಟ್‌ ನೀಡಲು ಮುಂದಾಗಿದೆಯೇ ಎಂದು ಹುಡುಕ ಹೊರಟಾಗ ಇದೂ ಕೂಡ ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ. 

ಜೆಟ್‌ ವೇಸ್‌ ಸಂಸ್ಥೆಯು ಈ ರೀತಿಯ ಯಾವುದೇ ಕೊಡುಗೆಯನ್ನು ನೀಡಿಲ್ಲ. ಇಂತಹ ಸುಳ್ಳು ಸಂದೇಶಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಲು ಪ್ರಾರಂಭವಾದ ಬಳಿಕ ಸ್ವತಃ ‘ಜೆಟ್‌ ವೇಸ್‌’ ಟ್ವೀಟ್‌ ಮಾಡಿದ್ದು, ಅದರಲ್ಲಿ ‘25ನೇ ವಾರ್ಷಿಕೋತ್ಸವ ನಿಮಿತ್ತ ವಿಮಾನಯಾನಕ್ಕೆ ಉಚಿತ ಟಿಕೆಟ್‌ ನೀಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. ಅಧಿಕೃತವಾಗಿ ಕಂಪನಿ ವತಿಯಿಂದ ಆ ರೀತಿಯ ಯಾವುದೇ ಕೊಡುಗೆಯನ್ನೂ ನೀಡಲಾಗುತ್ತಿಲ್ಲ’ ಎಂದು ಹೇಳಿದೆ. ಅಲ್ಲದೆ ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿನ ಲಿಂಕ್‌ನಲ್ಲಿ ‘aಜ್ಟಿಡಿays’ಎಂಬುದನ್ನು ತಪ್ಪಾಗಿ ಬರೆಯಲಾಗಿದೆ.

loader