ಗೋದಾಮೊಂದರಲ್ಲಿ ರಾಶಿ ರಾಶಿ ಹಣವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ತಮಿಳುನಾಡಿನ ನಾಯಕನಿಗೆ ಸೇರಿದ್ದು ಎಂಬ ಸದ್ದೂ ಕೇಳಿ ಬಂದಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ವಿವರ
ಚೆನ್ನೈ[ಮಾ.13]: ಗೋದಾಮೊಂದರಲ್ಲಿ ರಾಶಿ ರಾಶಿ ಹಣವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹಣ ತಮಿಳುನಾಡಿನ ರಾಜಕಾರಣಿಯೊಬ್ಬರಿಗೆ ಸಂಬಂಧಿಸಿದ್ದು ಎಂದು ಆರೋಪಿಸಲಾಗಿದೆ.
ವಿಡಿಯೋವನ್ನು ಪೋಸ್ಟ್ ಮಾಡಿ, ‘ ಕ್ಯಾಶ್ ಕ್ಯಾಶ್ ಎಲ್ಲಿ ನೋಡಿದರೂ ಕ್ಯಾಶ್. ಇದು ತಮಿಳುನಾಡಿನ ರಾಜಕಾರಣಿಗೆ ಸಂಬಂಧಿಸಿದ್ದು. ನೋಟುಗಳು ಸುಟ್ಟು ಕರಕಲಾಗಿವೆ ನಿಜ. ಆದರೆ ಲೆಕ್ಕಕ್ಕೇ ಸಿಗದ ಹಣ ಎಷ್ಟಿದೆ ನೋಡಿ’ ಎಂದು ಒಕ್ಕಣೆ ಬರೆದು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಗುಲಾಬಿ, ಹಸಿರು, ಹಳದಿ ಬಣ್ಣದ ನೋಟುಗಳಿವೆ.

ಈ ಹಿಂದೆ ಫ್ರಾನ್ಸ್ ನಲ್ಲಿಯೂ ಇದೇ ವಿಡಿಯೋ ವೈರಲ್ ಆಗಿತ್ತು. ಅಲ್ಲಿನ ಸಚಿವರೊಬ್ಬರು ಅಕ್ರಮವಾಗಿ ಹಣ ಕೂಡಿಟ್ಟಿದ್ದು, ತನಿಖೆ ಭೀತಿಯಲ್ಲಿ ಸಚಿವರ ಹೆಂಡತಿ ಹಣವನ್ನು ಸುಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಈ ವಿಡಿಯೋದ ಅಸಲಿಯತ್ತೇನು ಎಂದು ಪರಿಶೀಲಿಸಿದಾಗ ಇದೊಂದು ಕಲೆ ಎಂದು ತಿಳಿದುಬಂದಿದೆ.
ಅಲೆಜಾಂಡ್ರೋ ಮಾಂಗೇ ಎಂಬುವವರ ಕುಂಚದಲ್ಲಿ ಮೂಡಿಬಂದ ಕಲೆ ಇದು. 2018ರಲ್ಲಿ ಸ್ವತಃ ಮಾಂಗೇ ವಿಡಿಯೋವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
