ಈ ನಂಬರ್‌ಗೆ ಕರೆ ಮಾಡಿದರೆ ವ್ಯರ್ಥ ಆಹಾರ ಒಯ್ದು ಬಡವರಿಗೆ ಹಂಚುತ್ತಾರಾ..?

Viral Check There Is No Dial 1098 Scheme To Distribute Excess Food To Need Children
Highlights

ಪ್ರಧಾನಿ ನರೇಂದ್ರ ಮೋದಿ ಹಸಿದ ಮಕ್ಕಳಿಗೆ ಆಹಾರ ಒದಗಿಸಲು 1098 ಎಂಬ ಮಕ್ಕಳ ಸಹಾಯವಾಣಿಯನ್ನು ಘೋಷಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಸಿದ ಮಕ್ಕಳಿಗೆ ಆಹಾರ ಒದಗಿಸಲು 1098 ಎಂಬ ಮಕ್ಕಳ ಸಹಾಯವಾಣಿಯನ್ನು ಘೋಷಿಸಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ವೈರಲ್ ಆಗಿರುವ ಸಂದೇಶದಲ್ಲಿ, ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದ ಸಂದರ್ಭದಲ್ಲಿ ಈವರೆಗೆ ಸಾಕಷ್ಟು ಆಹಾರ ವ್ಯರ್ಥವಾಗುತ್ತಿತ್ತು. ಇದಕ್ಕಾಗಿಯೇ ಮೋದಿ 1098 ಎಂಬ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಘೋಷಿಸಿದ್ದಾರೆ. 

ದಯವಿಟ್ಟು ಈ ನಂಬರ್‌ಗೆ ಕರೆ ಮಾಡಿ. ಅವರು ನಿಮ್ಮ ಮನೆಯಲ್ಲಿರುವ ಉಳಿದ ಆಹಾರ ಪದಾರ್ಥವನ್ನು ಒಯ್ದು ಹಸಿದ ಮಕ್ಕಳಿಗೆ ನೀಡುತ್ತಾರೆ. ಬೇಡುವ ಕೈಗಳಿಗಿಂತ ಸಹಾಯ ಮಾಡುವ ಕೈ ಶ್ರೇಷ್ಠ ಎಂದು ಹೇಳಲಾಗಿದೆ. ಅಲ್ಲದೆ, ಪ್ರಧಾನಿ ಮೋದಿಯವರ ಈ ಕ್ರಮದ ಕುರಿತು ಅರಿವು ಮೂಡಿಸುವುದು ಅವಶ್ಯಕವಾಗಿದೆ. 

ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ಸರ್ವೀಸ್ 1098 ಸಂಸ್ಥೆ ಉಳಿದ ಆಹಾರವನ್ನು ಕೊಂಡೊಯ್ದು, ಹಸಿದವರಿಗೆ ಹಂಚುವ ಸಾಮಾಜಿಕ ಕಾರ್ಯ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಸಂದೇಶವನ್ನು ಹಲವರು ಶೇರ್ ಮಾಡಿದ್ದಾರೆ. ಆದರೆ ಪ್ರಧಾನಿ 1098 ಎಂಬ ಸಹಾಯವಾಣಿ ಸಂಖ್ಯೆ ಪ್ರಾರಂಭಿಸಿದ್ದು ನಿಜವೇ ಎಂದು ಹುಡುಕಹೊರಟಾಗ, ಈ ಸಂದೇಶದ ಹಿಂದಿನ ವಾಸ್ತವತೆ ಬಯಲಾಗಿದೆ.

ಮೋದಿ 1098 ಎಂಬ ಯಾವುದೇ ಸಹಾಯವಾಣಿ ಸಂಖ್ಯೆ ಘೋಷಿಸಿಲ್ಲ. ಭಾರತದಲ್ಲಿ ಹಸಿದವರಿಗೆ ಅನ್ನ ತಲುಪಿಸುವ ಯಾವುದೇ ಸಹಾಯವಾಣಿಯೂ ಇಲ್ಲ. ಇದು ಸಂಪೂರ್ಣ ವದಂತಿ. ಅಂದಹಾಗೇ ಈ ರೀತಿಯ ವದಂತಿ ಹರಡುತ್ತಿರುವುದು ಇದೇ ಮೊದಲೇನಲ್ಲ.ಟೆಲಿಗ್ರಾಫ್ 2012 ರಲ್ಲಿಯೇ ಈ ಬಗ್ಗೆ ವರದಿ ಮಾಡಿತ್ತು. 

ಅದರಲ್ಲಿ ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್ ಸರ್ವೀಸ್ ಮುಖ್ಯಸ್ಥರೇ ಪ್ರತಿಕ್ರಿಯಿಸಿ, ಆಹಾರ ಕೊಂಡೊಯ್ಯುವಂತೆ ನಿತ್ಯ ಕರೆಗಳು ಬರುತ್ತಿವೆ. ಆದರೆ ನಾವು ಈ ರೀತಿಯ ಸಹಾಯವಾಣಿ ಪ್ರಾರಂಭಿಸಿಲ್ಲ. ಸಂಸ್ಥೆಯ ಸಹಾಯವಾಣಿ ಇರುವುದು ಕೇವಲ ಮಕ್ಕಳ ಕಾಳಜಿ ಮತ್ತು ರಕ್ಷಣೆಗಾಗಿ ಎಂದು ಪ್ರತಿಕ್ರಿಯಿಸಿದ್ದರು.

loader