ಸಿನಿಮಾಗಳಂತೆ ನೈಜಜೀವನದಲ್ಲೂ ಹೀಗೆ ಆಗಲು ಸಾಧ್ಯವೇ ಎಂದು ಇದರ ಸತ್ಯಾಸತ್ಯತೆಯನ್ನು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು.

ಪಂಜಾಬ್‌'ನ ಸುಂದರ ಲೇಡಿ ಪೊಲೀಸ್‌'ವೊಬ್ಬರ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಹುದಿನಗಳಿಂದ ಓಡಾಡುತ್ತಾ ಸಖತ್ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಾದ ಫೇಸ್‌'ಬುಕ್, ಟ್ವೀಟರ್, ವಾಟ್ಸ್'ಆ್ಯಪ್‌'ಗಳಲ್ಲಿ ಪೊಲೀಸ್ ವಸ್ತ್ರ ಧರಿಸಿರುವ ಈ ಸುಂದರ ಮಹಿಳೆಯ ಪೋಟೋವನ್ನು ಪೋಸ್ಟ್ ಮಾಡಿ, ‘ಹರ್ಲೀನ್ ಮನ್ ಪಂಜಾಬಿನ ಪೊಲೀಸ್ ಅಧಿಕಾರಿಯಾದಾಗಿನಿಂದ ಜನರು ಜೈಲು ಸೇರಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ!’ ಎಂದು ಅಡಿಬರಹವನ್ನು ಬರೆಯಲಾಗಿದೆ.

ಸಿನಿಮಾಗಳಂತೆ ನೈಜಜೀವನದಲ್ಲೂ ಹೀಗೆ ಆಗಲು ಸಾಧ್ಯವೇ ಎಂದು ಇದರ ಸತ್ಯಾಸತ್ಯತೆಯನ್ನು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು. ಪೋಟೋದಲ್ಲಿ ಪೊಲೀಸ್ ವಸ್ತ್ರ ಧರಿಸಿರುವ ಮಹಿಳೆ ಹರ್ಲೀನ್ ಮನ್ ಅಲ್ಲ. ಅಲ್ಲದೆ ಈ ಫೋಟೋದಲ್ಲಿರುವ ಮಹಿಳೆ ಪಂಜಾಬಿನ ಪೊಲೀಸ್ ಅಧಿಕಾರಿಯೂ ಅಲ್ಲ. ಬದಲಾಗಿ ಪೋಟೋದಲ್ಲಿರುವವರು ಬಾಲಿವುಡ್ ನಟಿ, ಕೈನಾಥ್ ಅರೋರಾ. ‘ಜಗ್ಗಾ ಜಿಂಡೆ’ ಎಂಬ ಪಂಜಾಬಿ ಸಿನಿಮಾ ಚಿತ್ರೀಕರಣದ ವೇಳೆ ಈ ರೀತಿ ಪೊಲೀಸ್ ವಸ್ತ್ರ ಧರಿಸಿದ್ದರು. ಈ ಪೋಟೋ ಈ ರೀತಿ ತಪ್ಪಾಗಿ ವೈರಲ್ ಆಗಿದೆ.

#comingtolifesoon #kainaatarora As #harleenmaan @jeetkalsi9 @mikasingh presents #jaggajiyuandae makeup : @rajus_makeup

A post shared by Kainaat Arora ( Babyjaan ) (@ikainaatarora) on

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಟೋ ವೈರಲ್ ಆಗಿದ್ದನ್ನು ನೋಡಿ ಸ್ವತಃ ಕೈನಾಥ್ ತಮ್ಮ ಇನ್‌'ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ‘ಹರ್ಲೀನ್ ಮನ್ ಎಂಬುದು ‘ಜಗ್ಗಾ ಜಿಂಡೆ’ ಸಿನಿಮಾದಲ್ಲಿ ಬರುವ ಪಾತ್ರವಷ್ಟೇ. ಆದರೆ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೋಕ್‌'ಗಳು ಹರಿದಾಡುತ್ತಿವೆ.

First day with beautiful @ikainaatarora "jagga jiunda e" ..... waheguru.

A post shared by Daljeet Kalsi (@jeetkalsi9) on

ಆದರೆ ನಾನು ನಿಜವಾದ ಪೊಲೀಸ್ ಅಧಿಕಾರಿ ಅಲ್ಲ’ ಎಂದಿದ್ದಾರೆ. ಹೀಗಾಗಿ ಸುಂದರ ಮಹಿಳೆ ಪೊಲೀಸ್ ಅಧಿಕಾರಿಯಾಗಿರುವುದರಿಂದ ಜನರು ಜೈಲು ಸೇರಲು ಕಾತರದಿಂದ ಕಾಯುತ್ತಿದ್ದಾರೆ ಎಂಬಂತಹ ಸುದ್ದಿ ಸುಳ್ಳು