Asianet Suvarna News Asianet Suvarna News

ಎರಡು ಕೋಟಿ ಯುವ ಜನರಿಗೆ ಮೋದಿಯಿಂದ ಉಚಿತ ಲ್ಯಾಪ್‌ಟಾಪ್‌?

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಈ ನಡುವೆ ನರೇಂದ್ರ ಮೋದಿ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ಎರಡು ಕೋಟಿ ಯುವ ಜನರಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Viral Check of PM Modi announce free laptop to youths under Make in India
Author
Bengaluru, First Published May 28, 2019, 9:22 AM IST

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಈ ನಡುವೆ ನರೇಂದ್ರ ಮೋದಿ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ಎರಡು ಕೋಟಿ ಯುವ ಜನರಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೂರ್ತಿ ಸಂದೇಶ ಹೀಗಿದೆ-‘ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ 2 ಕೋಟಿ ಯುವ ಜನರಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವುದಾಗಿ ಘೋಷಿಸಿದ್ದಾರೆ.

ಈಗಾಗಲೇ 30 ಲಕ್ಷ ಜನರು ಅರ್ಜಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದೆ. ಫೇಸ್‌ಬುಕ್‌ ಟ್ವೀಟರ್‌, ವಾಟ್ಸ್‌ಆ್ಯಪ್‌ನಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಜೊತೆಗೆ ಅರ್ಜಿ ಹಾಕಲು ಈ ಲಿಂಕ್‌ ಒತ್ತಿ ಎಂದು ಕೂಡ ಹೇಳಲಾಗಿದೆ.

ಆದರೆ ನಿಜಕ್ಕೂ ಮೋದಿ ಇಂಥದ್ದೊಂದು ಯೋಜನೆ ಘೋಷಿಸಿದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಮೇಲ್ನೋಟಕ್ಕೇ ತಿಳಿದುಬರುತ್ತದೆ. ಅಲ್ಲದೆ ಈ ಸಂದೇಶದಲ್ಲಿ ನೀಡಲಾಗಿರುವ ವೆಬ್‌ಸೈಟ್‌ ಲಿಂಕ್‌, ಮೇಕ್‌ ಇನ್‌ ಇನ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ ವಿಳಾಸ ಅಲ್ಲ.

ಈ ಲಿಂಕ್‌ ಒತ್ತಿದ್ದಾಗ ಹೆಸರು, ವಿಳಾಸ, ರಾಜ್ಯ ಮತ್ತಿತರ ಮಾಹಿತಿ ಕೇಳುತ್ತದೆ. ಇದನ್ನು ಭರ್ತಿ ಮಾಡಿದಾಗ 2 ಪ್ರಶ್ನೆಗೆ ಉತ್ತರಿಸುವಂತೆ ಕೇಳುತ್ತದೆ. ಅನಂತರ ಅರ್ಜಿ ಪೂರ್ಣಗೊಳ್ಳಲು ಈ ಸಂದೇಶವನ್ನು 10 ಜನರಿಗೆ ಕಳುಹಿಸುವುದು ಕಡ್ಡಾಯ. ಅಲ್ಲಿಗೆ ಇದು ನಕಲಿ ವೆಬ್‌ಸೈಟ್‌ ಎಂಬುದು ಸ್ಪಷ್ಟ. ಅಲ್ಲದೆ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಸೂಚನೆಗಳಲ್ಲಿ ವ್ಯಾಕರಣ ದೋಷಗಳಿವೆ.

- ವೈರಲ್ ಚೆಕ್ 

Follow Us:
Download App:
  • android
  • ios