ತಿರುಮಲ(ಜ.22): ಇಲ್ಲಿನ ಬೈಪಾಸ್ ರಸ್ತೆಯಲ್ಲಿ 4 ಜಿಹಾದಿ ಉಗ್ರವಾದಿಗಳು ಕಾಣಿಸಿಕೊಂಡಿದ್ದು, ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಸತ್ತು ಮೂವರು ಬಂಧಿತರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಉಗ್ರವಾದಿಗಳ ಕಾರು ಬೈಪಾಸ್ ರಸ್ತೆಗೆ ಬರುತ್ತಿದ್ದಂತೇ ಕಾರನ್ನು ಸುತ್ತುವರೆದ ಸೇನಾಪಡೆ ಅವರ ಮೇಲೆ ಗುಂಡಿನ ದಾಳಿ ಮಾಡಿದೆ. ಕೂಡಲೇ ಕಾರಿನಿಂದ ಇಳಿದು ಓಡತೊಡಗಿದ್ದ ಉಗ್ರವಾದಿಗಳನ್ನು ಬೆನ್ನೆತ್ತಿ ಓರ್ವನನ್ನು ಕೊಲ್ಲಲಾಗಿದೆ.

"

ಇದೇ ವೇಳೆ ಮೂವರು ಉಗ್ರವಾದಿಗಳನ್ನು ವಶಕ್ಕೆ ಪಡೆದ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಕುರಿತು ಗೊಂದಲಗಳಿವೆ. ಮೂಲಗಳ ಪ್ರಕಾರ ಭಯೋತ್ಪಾದಕ ದಾಳಿಗಳಾದಾಗ ಸೇನಾ ಕಾರ್ಯಾಚರಣೆ ಹೇಗಿರುತ್ತದೆ ಎಂಬುದರ ಕುರಿತು ಸೈನಿಕರು ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಸಿದ ವಿಡಿಯೋ ಇದಾಗಿದೆ ಎಂಬುದು ಸ್ಪಷ್ಟವಾಗಿದೆ.

 

ತೆಲಂಗಾಣದ ಸೈಬರಾಬಾದ್ ಪೊಲೀಸ್ ಇಲಾಖೆಯ ಆಕ್ಟೋಪಸ್ ತಂಡ ವಾರಂಗಲ್ ನಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದ್ದು, ಇದನ್ನು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗುತ್ತಿದೆ.

ಆದರೆ ತಿರುಮಲದಲ್ಲಿ ಭಯೋತ್ಪಾದಕರ ಎನ್‌ಕೌಂಟರ್ ಎಂದೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.