ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ವರ್ಷದ ಮಗುವಿನ ಬಳಿ ನಿನಗೆ ಯಾರೆಂದರೆ ತುಂಬಾ ಇಷ್ಟ ಎಂದು ಕೇಳುತ್ತಾರೆ. ಆ ಮುಗ್ಧ ಬಾಲಕ ನೀಡಿದ ಉತ್ತರ ಕೇಳಿ ಟ್ರಂಪ್ ಶಾಕ್ ಆಗ್ತಾರೆ. ಅಮೆರಿಕಾ ಅಧ್ಯಕ್ಷರು ಶಾಕ್ ಆಗೋದು ಯಾಕೆ ಗೊತ್ತಾ? ಆ ಪುಟ್ಟ ಬಾಲಕನಿಗೆ ಮೋದಿ ಕಂಡರೆ ಹೆಚ್ಚು ಇಷ್ಟ ಎಂದು ಆ ಬಾಲಕ ನೀಡಿದ ಉತ್ತರದಿಂದ.

ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿಯವರ ಫಾಲೋವರ್ಸ್ ಇದನ್ನು ಶೇರ್ ಕೂಡ ಮಾಡಿದ್ದಾರೆ. ಆದರೆ ನಿಜಕ್ಕೂ 2ವರ್ಷದ ಪುಟ್ಟ ಬಾಲಕ ಹೀಗೆ ಹೇಳಲು ಸಾಧ್ಯವೇ ಎಂದು ಇದರ ಸತ್ಯಾಸತ್ಯತೆ ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು. ಇದೊಂದು ‘ಮ್ಯಾಡ್‌ಲಿಪ್ಜ್’ ಎಂಬ ಆ್ಯಪ್‌ನ್ನು ಬಳಸಿ ಡಬ್ ಮಾಡಿದ ವಿಡಿಯೋವಾಗಿತ್ತು.
2016ರಲ್ಲಿ ಡೊನಾಲ್ಡ್ ಟ್ರಂಪ್ ವಲ್ಕೀಸ್ ಬಾರೆಯ ಪೆನ್ಸಿಲ್‌ವೇನಿಯಾದಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿರುವಾಗ, 2ವರ್ಷದ ಬಾಲಕನ ಬಳಿ ‘ನೀನು ನಿನ್ನ ತಂದೆ ತಾಯಿ ಬಳಿ ವಾಪಸ್ ಹೋಗುತ್ತೀಯಾ
ಅಥವಾ ಟ್ರಂಪ್ ಬಳಿಯೇ ಇರಲು ಬಯಸುತ್ತೀಯಾ? ಎಂದು ಕೇಳಿದ್ದರು. ಆಗ ಆ ಪುಟ್ಟ ಬಾಲಕ ‘ಟ್ರಂಪ್’ ಎಂದು ಉತ್ತರಿಸಿದ್ದ. ಈ ವಿಡಿಯೋವನ್ನು ತಿರುಚಿ ಡಬ್ ಮಾಡಿ ‘ನೀನು ಯಾರನ್ನು ಹೆಚ್ಚು ಇಷ್ಟ ಪಡುತ್ತೀಯಾ? ಎಂದು ಸೇರಿಸಿ ಬಾಲಕನ ಪ್ರತಿಕ್ರಿಯೆಯನ್ನು ‘ಮೋದಿ’ ಎಂದು ತಿರುಚಲಾಗಿದೆ.
ಹೀಗಾಗಿ 2 ವರ್ಷದ ಚಿಕ್ಕ ಬಾಲಕ ಮೋದಿಯೇ ನನ್ನ ಫೇವರಿಟ್ ಎಂದು ಹೇಳಿರುವುದು ಸುಳ್ಳು
![[ವೈರಲ್ ಚೆಕ್] 2 ವರ್ಷದ ಅಮೆರಿಕ ಬಾಲಕನಿಗೆ ಮೋದಿಯೇ ಫೇವರಿಟ್! [ವೈರಲ್ ಚೆಕ್] 2 ವರ್ಷದ ಅಮೆರಿಕ ಬಾಲಕನಿಗೆ ಮೋದಿಯೇ ಫೇವರಿಟ್!](https://static.asianetnews.com/images/w-1280,h-720,imgid-bf39168f-179d-4ede-ac32-8e90759a78fd,imgname-image.jpg)