ನವದೆಹಲಿ[ಮಾ.03]: ಪಾಕಿಸ್ತಾನದಿಂದ ತಾಯ್ನಾಡಿಗೆ ಮರಳಿರುವ ಭಾರತೀಯ ವಾಯುಸೇನೆಯ ಪೈಲಟ್ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹೆಸರಿನಲ್ಲಿ ದುಷ್ಕರ್ಮಿಗಳು ಟ್ವಿಟರ್ ನಲ್ಲಿ ಫ್ರಾಡ್ ಆರಂಭಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಅಭಿನಂದನ್ ಹೆಸರಿನ್ಲಲಿ ಹಲವಾರು ನಕಲಿ ಟ್ವಿಟರ್ ಅಕೌಂಟ್ ಗಳು ಸೃಷ್ಟಿಯಾಗಿದ್ದು, ಇವುಗಳಿಂದ ಹಲವಾರು ಫೋಟೋ ಹಾಗೂ ಮಾಹಿತಿಗಳನ್ನು ಹಂಚಲಾಗುತ್ತಿದೆ.

ನಕಲಿ ಟ್ವಿಟರ್ ಖಾತೆ:

ಅಭಿನಂದನ್ ಮಾ. 1ರ ಶುಕ್ರವಾರದಂದು ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಬಂದಿದ್ದಾರೆ. ಭಾರತೀಯ ವಾಯುಸೇನೆಯ ಪೈಲಟ್ ವಾಘಾ ಗಡಿ ದಾಟುತ್ತಿದ್ದಂತೆಯೇ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ. ಹೀಗಿರುವಾಗ ಅಭಿನಂದನ್ ರವರ ಹೆಸರಿನ ಲಾಭ ಪಡೆಯುವ ನಿಟ್ಟಿನಲ್ಲಿ ಹಲವಾರು ನಕಲಿ ಖಾತೆಗಳು ಸೃಷ್ಟಿಯಾಗಿದ್ದು, ಇವೆಲ್ಲವೂ ಅವರ ವೈಯುಕ್ತಿಕ ಖಾತೆ ಎಂಬಂತೆ ಕಾರ್ಯ ನಿರ್ವಹಿಸುತ್ತಿವೆ.

ಭಾರತೀಯ ವಾಯುಸೇನೆಯೂ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, @Abhinandan_wc ಎಂಬ ಹೆಸರಿನಲ್ಲಿರುವ ಖಾತೆ ನಕಲಿಯಾಗಿದೆ. ಆದರೆ ಇದು ನಿರಂತರವಾಗಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ರಿಯಲ್ ಅಕೌಂಟ್ ಎಂದು ಸಾಬೀತುಪಡಿಸಲು ಯತ್ನಿಸುತ್ತಿದೆ ಎಂದಿದ್ದಾಋಎ. ಈ ಅಕೌಂಟ್ ನಲ್ಲಿ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ಪೈಟಲ್ ಅಭಿನಂದನ್ ರನ್ನು ಭೇಟಿಯಾಗಿರುವ ಪೋಟೋ ಕೂಡಾ ಟ್ವೀಟ್ ಮಾಡಲಾಗಿದೆ.

ಸದ್ಯ ಈ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಹೀಗಿದ್ದರೂ @dexxture__ ಎಂಬ ಹೆಸರಿನಲ್ಲಿರಿವ ನಕಲಿ ಖಾತೆ ಇನ್ನೂ ಸಕ್ರಿಯವಾಗಿದ್ದು, ಇದು ಬರೋಬ್ಬರಿ 4 ಸಾವಿರ ಫಾಲೋವರ್ಸ್ ಹೊಂದಿದೆ. ಇದನ್ನು ಹೊರತುಪಡಿಸಿ @IAF_Abhinanden ಹಾಗೂ @Abhinandan_WCdr ಹೆಸರಿನ ಅಕೌಂಟ್ ಗಳೂ ಕೂಡಾ ಸಕ್ರಿಯವಾಗಿವೆ. ಈ ಖಾತೆಗಳು ಅಸಲಿಯೋ, ನಕಲಿಯೋ ಎಂಬುವುದು ಇನ್ನೂ ಖಾತ್ರಿಯಾಗಿಲ್ಲ.

ಒಟ್ಟಾರೆಯಾಗಿ ಅಸಲಿ ಖಾತೆ ಯಾವುದು ಎಂದು ತಿಳಿಯುವವರೆಗೂ ಇಂತಹ ಟ್ವಿಟರ್ ಖಾತೆಗಳನ್ನು ಫಾಲೋ ಮಾಡದಿರುವುದೇ ಜಾಣತನ. ಇಂತಹ ನಕಲಿ ಖಾತೆಗಳಿಂದ ದೂರವಿದ್ದು, ಸುರಕ್ಷಿತವಾಗಿರಿ.