ಫೇಸ್’ಬುಕ್ ಹ್ಯಾಕ್ ಆಗಿದ್ಯಾ ಎಂದು ತಿಳಿಯಲು ಹೀಗೆ ಮಾಡಿ

First Published 24, Mar 2018, 10:27 AM IST
Viral Check
Highlights

ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣವು ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಳಕೆದಾರರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂದು ನೀವೇ ತಿಳಿಯಬಹುದೆಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ನಿಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬ ಬಗ್ಗೆ  bff ಪದವನ್ನು ಪರಿಚಯಿಸಿದ್ದಾರೆ.

ಬೆಂಗಳೂರು (ಮಾ.24): ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣವು ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಳಕೆದಾರರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂದು ನೀವೇ ತಿಳಿಯಬಹುದೆಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ ‘ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ನಿಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆಯೇ ಇಲ್ಲವೇ ಎಂಬ ಬಗ್ಗೆ  bff ಪದವನ್ನು ಪರಿಚಯಿಸಿದ್ದಾರೆ.

ಫೇಸ್‌ಬುಕ್‌ ಕಾಮೆಂಟ್‌ ಬಾಕ್ಸ್‌ನಲ್ಲಿ bff ಎಂದು ಟೈಪ್‌ ಮಾಡಿದಾಗ ಅದು ಹಸಿರು ಬಣ್ಣಕ್ಕೆ ಬದಲಾದರೆ ನಿಮ್ಮ ಅಕೌಂಟ್‌ ಸುರಕ್ಷಿತವಾಗಿದೆ ಎಂದರ್ಥ. ಹಾಗೆಯೇ ಅದು ಯಾವುದೇ ಬಣ್ಣಕ್ಕೆ ಬದಲಾಗದಿದ್ದಲ್ಲಿ ನಿಮ್ಮ ಅಕೌಂಟ್‌ ಹ್ಯಾಕ್‌ ಆಗಿದೆ ಎಂದರ್ಥ. ಒಂದು ವೇಳೆ ನೀವು ಬರೆದ ಪದ ಹಸಿರು ಬಣ್ಣಕ್ಕೆ ಪರಿವರ್ತನೆಯಾಗದಿದ್ದಲ್ಲಿ ಕೂಡಲೇ ನಿಮ್ಮ ಪಾಸ್‌ವರ್ಡ್‌ ಬದಲಿಸಿ’ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಫೇಸ್‌ಬುಕ್‌ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಜುಕರ್‌ಬರ್ಗ್‌ ಈ ಪದ ಪರಿಚಯಿಸಿದ್ದು ನಿಜವೇ ಎಂದು ಹುಡುಕಹೊರಟಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಫೇಸ್‌ಬುಕ್‌ 2017ರ ಅಕ್ಟೋಬರ್‌ 23ರಂದು ಕೆಲ ಪದಗಳಿಗೆ ವಿಶೇಷತೆ ಸೂಚಿಸುವ ನಿಟ್ಟಿನಲ್ಲಿ Congratulations, bff thank you so much ನಂತಹ ಪದಗಳಿಗೆ ಒಂದೊಂದು ಬಣ್ಣವನ್ನು ಪರಿಚಯಿಸಿದೆ. ಅಲ್ಲದೆ ಆ ಪದಗಳ ಮೇಲೆ ಕ್ಲಿಕ್‌ ಮಾಡಿದಾಗ ಅನಿಮೇಶನ್‌ಗಳು ಕಾಣಿಸುತ್ತವೆ. ಅಂದಹಾಗೆ bff ಎಂದರೆ ‘ಬೆಸ್ಟ್‌ ಫ್ರೆಂಡ್‌ ಫಾರೆವರ್‌’ ಎಂದರ್ಥ. ಈ ಪದಕ್ಕೆ ಫೇಸ್‌ಬುಕ್‌ ವಿಶೇಷ ಕಲರ್‌ ಮತ್ತು ಅನಿಮೇಶನ್‌ ಪರಿಚಯಿಸಿದೆ. ಹಾಗಾಗಿ ಫೇಸ್‌ಬುಕ್‌ ಕಾಮೆಂಟ್‌ ಬಾಕ್ಸ್‌ನಲ್ಲಿ ಚ್ಛ್ಛಿ·ಎಂದು ಬರೆದಾಗ ಹಸಿರು ಬಣ್ಣಕ್ಕೆ ಪರಿವರ್ತನೆಯಾಗುತ್ತದೆ. ಇದು ಫೇಸ್‌ಬುಕ್‌ ಖಾತೆಯ ಸುರಕ್ಷತೆಯ ಸೂಚಕವಲ್ಲ.

loader