ರಸ್ತೆಯ ಇಕ್ಕೆಲಗಳಲ್ಲಿ ಮೂಡಿದೆ ಭಾರತ ಭೂಪಟ!

Viral Check
Highlights

ಹಸುವಿನ ಮೈಮೇಲೆ ವಿಶ್ವ ಭೂಪಟ ಮೂಡಿದೆ ಎಂಬಂತಹ ಫೋಟೋ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿತ್ತು. ಅದಕ್ಕೆ ಹಲವರು ‘ವ್ಹಾವ್’ ಎಂಬ ಉದ್ಗಾರ ತೆಗೆದಿದ್ದರು. ಅದೊಂದು ಅದ್ಭುತ ಎಂದು ಕರೆದು ಶೇರ್ ಮಾಡಿದ್ದರು. ಆ ಬಳಿಕ ಅದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಸುದ್ದಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಬೆಂಗಳೂರು (ಫೆ.14): ಹಸುವಿನ ಮೈಮೇಲೆ ವಿಶ್ವ ಭೂಪಟ ಮೂಡಿದೆ ಎಂಬಂತಹ ಫೋಟೋ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿತ್ತು. ಅದಕ್ಕೆ ಹಲವರು ‘ವ್ಹಾವ್’ ಎಂಬ ಉದ್ಗಾರ ತೆಗೆದಿದ್ದರು. ಅದೊಂದು ಅದ್ಭುತ ಎಂದು ಕರೆದು ಶೇರ್ ಮಾಡಿದ್ದರು. ಆ ಬಳಿಕ ಅದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಸುದ್ದಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ರಸ್ತೆಯ ಎರಡು ಇಕ್ಕೆಲಗಳಲ್ಲಿರುವ ಮರಗಳಲ್ಲಿ ಭಾರತ ಭೂಪಟದ ದೃಶ್ಯ ಮೂಡಿದೆ ಎಂಬಂತಹ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೊಂದು ಅದ್ಭುತವೆಂದೇ ಸಾಮಾಜಿಕ ಜಾಲತಾಣಗಳ ಬಳಕೆದಾರರು  ಅದನ್ನು ಶೇರ್ ಮಾಡುತ್ತಿದ್ದಾರೆ. ವಾಟ್ಸ್‌ಆ್ಯಪ್‌'ನಲ್ಲಿ  ಈ  ಫೋಟೋ  ಹೆಚ್ಚು ಹರಿದಾಡುತ್ತಿದೆ. ಆದರೆ ನಿಜಕ್ಕೂ ರಸ್ತೆಯ ಎರಡೂ ಬದಿಗಳಲ್ಲಿರುವ ಮರಗಳು ಒಂದುಗೂಡಿ ಭಾರತ ಭೂಪಟವನ್ನೇ ಹೋಲುವಂತಹ ದೃಶ್ಯ ಮೂಡಿದೆಯೇ? ಹಾಗಾದರೆ ಅದು
ಯಾವ ಸ್ಥಳ ಎಂದು ಹುಡುಕ ಹೊರಟಾಗ ಆ ಫೋಟೋದ ಹಿಂದಿನ ಅಸಲಿ ಕತೆ ಬಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋವನ್ನು  ಫೋಟೋಶಾಪ್ ಮೂಲಕ ಎಡಿಟ್ ಮಾಡಲಾಗಿದೆ. ಈ ರೀತಿ ನೈಸರ್ಗಿಕವಾಗಿ  ಯಾವುದೇ ಸ್ಥಳದಲ್ಲೂ ಭಾರತ ಭೂಪಟವನ್ನೇ ಹೋಲುವಂತೆ ರಸ್ತೆ ಇಕ್ಕೆಲಗಳಲ್ಲಿ  ಮರಗಳು ಬೆಳೆದಿಲ್ಲ. ಈ ಫೋಟೋಶಾಪ್ ಮಾಡಿದ ಫೋಟೋವನ್ನೇ ವಾಸ್ತವ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. 

loader