ಭೀಕರ ರಸ್ತೆ ಅಪಘಾತದಲ್ಲಿ ಗಾಯಕನ ಪುತ್ರಿ ಸಾವು! ಕೇರಳದ ಪಲ್ಲಿಪುರಂ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು! ಕೇರಳದ ಜನಪ್ರಿಯ ವೈಲಿನ್ ವಾದಕ ಬಾಲಾ ಭಾಸ್ಕರ್!ಅಪಘಾತದಲ್ಲಿ ಭಾಸ್ಕರ್ ಪುತ್ರಿ ತೇಜಸ್ವಿನಿ ದುರ್ಮರಣ! ಅಪಘಾತದಲ್ಲಿ ಭಾಸ್ಕರ್, ಪತ್ನಿ ಲಕ್ಷ್ಮೀಗೆ ಗಂಭೀರ ಗಾಯ
ತಿರುವನಂತಪುರಂ(ಸೆ.25): ಕೇರಳದ ಜನಪ್ರಿಯ ವೈಲಿನ್ ವಾದಕ ಮತ್ತು ಗಾಯಕ ಬಾಲಾ ಬಾಸ್ಕರ್ ಪುತ್ರಿ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅಪಘಾತದಲ್ಲಿ ಬಾಲಾ ಭಾಸ್ಕರ್ ಮತ್ತು ಪತ್ನಿ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ತ್ರಿಸ್ಸೂರಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಬಾಲಾ ಭಾಸ್ಕರ್ ಕುಟುಂಬ, ಮರಳಿ ತಿರುವನಂತಪುರಂ ಗೆ ಬರುವಾಗ ಪಲ್ಲಿಪುರಂ ಬಳಿ ಕಾರು ಅಪಘಾತಕ್ಕೀಡಾಗಿದೆ.

ಭಾಸ್ಕರ್ ಅವರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೂ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಭಾಸ್ಕರ್ ಅವರ ಎರಡು ವರ್ಷದ ಪುತ್ರಿ ತೇಜಸ್ವಿನಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ತಮ್ಮ 12ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಕಾಲೂರಿಸಿದ ಬಾಲಾ ಭಾಸ್ಕರ್, ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
