ಸಚಿವ ವಿನಯ್ ಕುಲಕರ್ಣಿ ಈಗಲೂ ಸಹ ಸುಮ್ಮನೇ ಕುಳಿತಿಲ್ಲ, ಯೋಗೀಶ್ ಗೌಡ ಪತ್ನಿ ಜತೆ ರಾಜೀಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಅನುಮಾನಗಲು ಹುಟ್ಟಿಕೊಂಡಿವೆ. ಏಕೆಂದರೆ ಮಲ್ಲಮ್ಮ ದಾಖಲಾಗಿರುವ ಆಸ್ಪತ್ರೆಗೆ ಸಚಿವರ ಪತ್ನಿ ನಿನ್ನೆ ಭೇಟಿ ನೀಡಿದ್ದಾರೆ.
ಧಾರವಾಡ: ಸಚಿವ ವಿನಯ್ ಕುಲಕರ್ಣಿ ಈಗಲೂ ಸಹ ಸುಮ್ಮನೇ ಕುಳಿತಿಲ್ಲ, ಯೋಗೀಶ್ ಗೌಡ ಪತ್ನಿ ಜತೆ ರಾಜೀಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಅನುಮಾನಗಲು ಹುಟ್ಟಿಕೊಂಡಿವೆ. ಏಕೆಂದರೆ ಮಲ್ಲಮ್ಮ ದಾಖಲಾಗಿರುವ ಆಸ್ಪತ್ರೆಗೆ ಸಚಿವರ ಪತ್ನಿ ನಿನ್ನೆ ಭೇಟಿ ನೀಡಿದ್ದಾರೆ.
ಗಣಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ನಿನ್ನೆ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಲ್ಲಮ್ಮ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೇ ಭೇಟಿ ನೀಡಿ ಆಸ್ಪತ್ರೆ ಒಳಗೆ ಅರ್ಧ ಗಂಟೆ ಕಳೆದರೂ ಮಲ್ಲಮ್ಮ ವಾರ್ಡ್ ಕಡೆಗೆ ಹೋಗಲಿಲ್ಲ.
ಧಾರವಾಡದ ಕೆಲಗೇರಿ ರಸ್ತೆಯ ಡಾ.ಎಸ್.ಆರ್.ಜಂಬಗಿ ಅವರ ಶ್ರವ್ಯಾ ಆಸ್ಪತ್ರೆಯಲ್ಲಿ ಮಲ್ಲಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಮಲ್ಲಮ್ಮ ಇರುವ ಆಸ್ಪತ್ರೆಗೆ ಶಿವಲೀಲಾ ಯಾಕೆ ಬಂದರು? ಭಾವನಾತ್ಮಕವಾಗಿ ಅಥವಾ ಹೇಗಾದರೂ ಮಾಡಿ ರಾಜೀ ಸಂಧಾನ ಮಾಡಬೇಕೆಂದು ಸಚಿವರು ಯತ್ನಿಸುತ್ತಿದ್ದಾರೆಯೇ? ? ವೈದ್ಯರ ಮೂಲಕ ಯೋಗೀಶ್ ಪತ್ನಿ ಮಲ್ಲಮ್ಮ ಜತೆ ರಾಜೀ ಸಂಧಾನ ಮಾಡುವ ಇರಾದೆ ಇದೆಯೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ಸಚಿವ ಮಲ್ಲಮ್ಮ ಕುಟುಂಬಸ್ಥರಿಗೂ ಈ ಬೆಳವಣಿಗೆ ಬಗ್ಗೆ ಅಚ್ಚರಿ, ಆತಂಕ ಉಂಟಾಗಿದೆ.
