ಗುವಾಹಟಿ[ಆ.28]: ಮೊತ್ತ ಮೊದಲ ಬಾರಿಗೆ ತಮ್ಮ ಗ್ರಾಮಕ್ಕೆ ಜಿಲ್ಲಾಧಿಕಾರಿಯೊಬ್ಬರ ಆಗಮನ ಕಂಡು ಸಂಭ್ರಮಿಸಿದ ಗ್ರಾಮಸ್ಥರು, ಜಿಲ್ಲಾಧಿಕಾರಿಯನ್ನು ಪಲ್ಲಕ್ಕಿ ಮೇಲೆ ಕೂರಿಸಿ ಅದ್ಧೂರಿ ಸ್ವಾಗತ ಕೋರಿದ್ದೂ, ಅಲ್ಲದೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಅಚ್ಚರಿಯ ಘಟನೆಯ ಮಿಜೋರಾಂನ ಕುಗ್ರಾಮ ತಿಸೋಪಿ ಎಂಬಲ್ಲಿ ನಡೆಸಿದೆ.

ತಿಸೋಪಿ ತಲುಪಲು ದಟ್ಟಕಾಡಿನಲ್ಲಿ ಸುಮಾರು 15 ಕಿ.ಮೀ ನಡೆದುಕೊಂಡೇ ಬರಬೇಕು. ಇದರ ಹೊರತಾಗಿಯೂ ಗ್ರಾಮದ ರಸ್ತೆ ಕಾಮಗಾರಿ ವೀಕ್ಷಿಸಲು ಸಿಯಾಹಾ ಜಿಲ್ಲಾಧಿಕಾರಿ ಭೂಪೇಂದ್ರ ಚೌಧರಿ, ಇತರೆ ಕೆಲ ಅಧಿಕಾರಿಗಳ ಜೊತೆಗೆ 15 ಕಿ.ಮೀ ನಡೆದುಕೊಂಡೇ ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದರು.

ಇದರಿಂದ ಹರ್ಷಗೊಂಡ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸ್ವಾಗತಿಸಿದ್ದಾರೆ.