ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಪುತ್ರ ಕಣಕ್ಕೆ ?

VIjeyendra May Contest Against CM
Highlights

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸ್ಥಳೀಯರು ಮನವಿ ಮಾಡಿ ವರುಣಾದಿಂದಲೇ ವಿಜಯೇಂದ್ರ ಕಣಕ್ಕಿಳಿಸುವಂತೆ ವರುಣಾ ಕ್ಷೇತ್ರದ ಅಧ್ಯಕ್ಷ ಶಿವಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕಮಾದಪ್ಪ ಮಾಡಿದ್ದಾರೆ.

ಮೈಸೂರು(ಮಾ.30): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಪುತ್ರ ಕಣಕ್ಕೆ ಇಳಿಯಲಿದ್ದಾರೆಯೇ ಈ ರೀತಿಯ ಊಹಾಪೋಹಗಳು ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.

ಸಿಎಂ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ತಂತ್ರದ ವಿರುದ್ಧ ಬಿಜೆಪಿ ನಾಯಕರು ಪ್ರತಿತಂತ್ರ ಹೂಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಸ್ಥಳೀಯರು ಮನವಿ ಮಾಡಿ ವರುಣಾದಿಂದಲೇ ವಿಜಯೇಂದ್ರ ಕಣಕ್ಕಿಳಿಸುವಂತೆ ವರುಣಾ ಕ್ಷೇತ್ರದ ಅಧ್ಯಕ್ಷ ಶಿವಯ್ಯ, ಪ್ರಧಾನ ಕಾರ್ಯದರ್ಶಿ ಚಿಕ್ಕಮಾದಪ್ಪ ಮಾಡಿದ್ದಾರೆ. ಲಿಂಗಾಯತ ಪ್ರಾಮುಖ್ಯತೆ ಹೊಂದಿರುವ ಕ್ಷೇತ್ರದಲ್ಲಿ ವಿಜೇಂದ್ರ ಕಣಕ್ಕಿಳಿಸಿ ಗೆಲ್ಲುವ ತಂತ್ರ ರೂಪಿಸಲಾಗಿದೆ.

ಮಾತಾಡುತ್ತಿದ್ದಾರೆ, ಆದರೆ ಇದು ಊಹಾಪೋಹ ಎಂದ ವಿಜಯೇಂದ್ರ

 ಈ ಬಗ್ಗೆ  ಸ್ಪಷ್ಟಿಕರಣ ನೀಡಿರುವ ವಿಜಯೇಂದ್ರ  ‘ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಅಪೇಕ್ಷೆಪಟ್ಟಿಲ್ಲ, ಅದು ಕೇವಲ ಊಹಾಪೋಹ. ‘ನನ್ನ ಸ್ಪರ್ಧೆ ಬಗ್ಗೆ ವರುಣಾ ಕ್ಷೇತ್ರದ ಜನರು ಮಾತನಾಡುತ್ತಿರೋದು ಸತ್ಯ. ವರುಣಾದಿಂದ ಸ್ಪರ್ಧಿಸುವ ಕುರಿತು ನಾನು ಯಾರ ಬಳಿಯೂ ಚರ್ಚೆ ಮಾಡಿಲ್ಲ. ‘ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅಥವಾ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ. ‘ವರುಣಾ ಕ್ಷೇತ್ರದಲ್ಲಿ ಯಾರೇ ಬಿಜೆಪಿ ಅಭ್ಯರ್ಥಿಯಾಗಿ ನಿಂತರೂ ಗೆದ್ದೇ ಗೆಲ್ತಾರೆ’ ‘ಎಲ್ಲ ವರ್ಗದ ಜನರು ಅನ್ಯಾಯವಾಗಿದೆ , ಸಮಾಜ ಒಡೆಯುವ ಕೆಲಸವಾಗಿದೆ ಎನ್ನುತ್ತಿದ್ದಾರೆ. ‘ಮೈಸೂರು, ಚಾಮರಾಜನಗರದಲ್ಲಿ ಸಿಎಂ ವಿರುದ್ಧ ಜನಾಕ್ರೋಶ ಇದೆ' ಎಂದು ಸಿದ್ದಗಂಗಾ ಮಠದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ತಿಳಿಸಿದ್ದಾರೆ.

loader