ಗೆಳೆಯರು, ಬಂಧುಗಳು ಎಲ್ಲ ಕೈಜೋಡಿಸಿ ತಮ್ಮಲ್ಲಿದ್ದ 100, 50 ರೂಪಾಯಿಗಳನ್ನೆಲ್ಲ ಒಟ್ಟುಗೂಡಿಸಿ ಮದುವೆ ನಡೆಸಿಕೊಟ್ಟಿದ್ದಾರೆ.
ವಿಜಯಪುರ (ನ.17): ಸಂಕಷ್ಟ ಏನೇ ಇದ್ದರೂ, ಒಗ್ಗಟ್ಟಿದ್ದರೆ, ಎಲ್ಲವೂ ಸಾಧ್ಯವೆಂಬುವುದು ವಿಜಯಪುರದಲ್ಲಿ ಸಾಬೀತಾಗಿದೆ.
ವಿಜಯಪುರದಲ್ಲಿ ರಾಜಕುಮಾರ್ ಗೋಳಸಂಗಿ ಎಂಬುವರ ಇಬ್ಬರು ಮಕ್ಕಳ ಮದುವೆ ಫಿಕ್ಸ್ ಆಗಿತ್ತು. ಆದರೆ, ನೋಟಿನ ನಿಷೇಧದಿಂದಾಗಿ ಸಮಸ್ಯೆ ಶುರುವಾಯ್ತು. ಆ ವೇಳೆ ಗೆಳೆಯರು, ಬಂಧುಗಳು ಎಲ್ಲ ಕೈಜೋಡಿಸಿ ತಮ್ಮಲ್ಲಿದ್ದ 100, 50 ರೂಪಾಯಿಗಳನ್ನೆಲ್ಲ ಒಟ್ಟುಗೂಡಿಸಿ ಮದುವೆ ನಡೆಸಿಕೊಟ್ಟಿದ್ದಾರೆ.
ಚಿನ್ನದಂಗಡಿ, ಕಿರಾಣಿ ಅಂಗಡಿಗಳಲ್ಲೆಲ್ಲ ಕೇವಲ ನಂಬಿಕೆಯ ಮೇಲೆ ಸಾಲ ಪಡೆದು ಮದುವೆಯನ್ನು ಸುಸೂತ್ರವಾಗಿ ಮುಗಿಸಿಕೊಂಡಿದ್ದಾರೆ.
