ವಿಜಯಪುರ(ಜೂ. 25)  ವಿಜಯಪುರ ರೈತ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಬ್ಯಾಂಕ್ ಸಾಲ‌ ರಿಯಾಯಿತಿ ಜಾಹೀರಾತನ್ನೇ ನೋಟಿಸ್ ಎಂದು ತಿಳಿದು ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.

ಸಾಲ ಪಾವತಿಗೆ ರಿಯಾಯಿತಿ ನೀಡಿ ಸಿಂಡಿಕೇಟ್ ಬ್ಯಾಂಕ್  ಜಾಹೀರಾತು ನೀಡಿತ್ತು. ಇದನ್ನೆ ಬ್ಯಾಂಕ್ ನೋಟೀಸ್ ಎಂದುಕೊಂಡು ಆತಂಕಕ್ಕೆ ಒಳಗಾದ ರೈತ ಆತಮಹತ್ಯೆ ಮಾಡಿಕೊಂಡಿದ್ದಾರೆ.

ಯಮನಾಗಿ ಬರ್ತೀರಾ, ಬ್ರಹ್ಮನಾಗಿ ಬರ್ತೀರಾ? ಕುಮಾರಣ್ಣಗೆ ಮಂಡ್ಯ ರೈತನ ಭಾವುಕ ಪತ್ರ!

ವಿಜಯಪುರ ಜಿ. ಬಸವನ ಬಾಗೇವಾಡಿ ತಾ. ಮಲಘಾಣ ಗ್ರಾಮದ ಸಂಗಪ್ಪ ಗರಸಂಗಿ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಸಂಗಪ್ಪ ಸಿಂಡಿಕೇಟ್ ಬ್ಯಾಂಕ್ ನಲ್ಲಿ 1.10 ಲಕ್ಷ ರೂ.‌ಸಾಲ  ಸಾಲ ಮಾಡಿದ್ದರು.  ಸೋಮವಾರ ಗ್ರಾಮಕ್ಕೆ ಬಂದಿದ್ದ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಜಾಹೀರಾತು ಹಂಚಿದ್ದರು. ರಿಯಾಯಿತಿಯಲ್ಲಿ ಸುಸ್ತಿ ಸಾಲ ಪಾವತಿಗೆ ಅವಕಾಶ ಇದೆ ಎಂದು ಜಾಹೀರಾತು ನೀಡಿದ್ದರು.

ಹಳೆ ಸಾಲಗಳನ್ನ ಓನ್ ಟೈಂ ಸೆಟ್ಲ್ ಮೆಂಟ್ ಮಾಡಿಕೊಳ್ಳಲು ಅವಕಾಶ ಇದೆ ಎಂದಿರುವ ಬ್ಯಾಂಕ್ ಸಿಂದ್ ಅದಾಲತ್ ಹೆಸರಿನಲ್ಲಿ ಸಾಲ ರಿಯಾಯಿತಿ ಪಾವತಿ ಅಭಿಯಾನ ನಡೆಸುತ್ತಿದೆ.